ಸೆಕ್ಸ್ ಟಾಯ್ಸ್ ನಾಶಕ್ಕೆ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ ಅಧಿಕಾರಿಗಳು

Update: 2021-12-09 14:44 GMT

ಬೆಂಗಳೂರು, ಡಿ.9: ದೇಶದಲ್ಲಿ ನಿಷೇಧ ಹೇರಲಾಗಿರುವ ಮಾನವನ ದೇಹದ ಭಾಗಗಳ ಹೋಲುವಂತಹ ಸೆಕ್ಸ್ ಟಾಯ್ಸ್  ಗಳನ್ನು ಜಪ್ತಿ ಮಾಡಲಾಗಿದ್ದು, ಈ ವಸ್ತುಗಳನ್ನು ನಾಶಮಾಡಲು ಕೆಂಪೇಗೌಡ ಏರ್ಪೋರ್ಟ್  ಕಸ್ಟಮ್ಸ್ ಅಧಿಕಾರಿಗಳು ಅನುಮತಿಗಾಗಿ ಕೋರ್ಟ್ ಮೊರೆಹೋಗಲು ಸಿದ್ಧತೆ ನಡೆಸಿದ್ದಾರೆ. 

ಜಪ್ತಿ ಮಾಡಿರುವಸೆಕ್ಸ್ ಟಾಯ್ಸ್ ಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಈ ಗೋಡೌನ್ ತುಂಬುತ್ತಿರುವುದರಿಂದ ಅವುಗಳನ್ನು ನಾಶಮಾಡಲು ಅನುಮತಿಗಾಗಿ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ.

ಸೆಕ್ಷನ್ 11 ಸಬ್ ಸೆಕ್ಷನ್ 2(ಯು) ಕಸ್ಟಮ್ಸ್ ಕಾಯ್ದೆ-1962ರ ಪ್ರಕಾರ ಸೆಕ್ಸ್ ಟಾಯ್ಸ್ ಗಳ ಆಮದು ಮತ್ತು ರಫ್ತು ಭಾರತದಲ್ಲಿ ಕಾನೂನುಬಾಹಿರವಾಗಿದೆ. ಕಾನೂನಿನ ಅರಿವಿಲ್ಲದೇ ವಿದೇಶಿ ಪೋರ್ಟಲ್ಸ್ ಹಾಗೂ ಹಲವು ವಿದೇಶಿ ವೆಬ್‍ಸೈಟ್‍ಗಳಲ್ಲಿ ಬೆಂಗಳೂರಿಗರು ಖರೀದಿಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News