ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-12-31 14:32 GMT

ಬೆಂಗಳೂರು, ಡಿ. 31: ‘ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಎಲ್ಲ ಸವಾಲುಗಳಿಂದ ಮುಕ್ತವಾಗಿ, ಜನರ ಬದುಕು ಹಸನಾಗಿ 2022ರ ಹೊಸ ವರ್ಷ ಎಲ್ಲರಿಗೂ ಹರುಷ ತರಲಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಮಟ್ಟದ ಹಲವು ಆಡಳಿತಾತ್ಮಕ ವಿಚಾರ ಮತ್ತು ಯೋಜನೆಗಳ ಅನುಷ್ಠಾನದೊಂದಿಗೆ ಹೊಸ ವರ್ಷದ ಪ್ರಾರಂಭದಲ್ಲಿಯೇ ಹೊಸ ಚೈತನ್ಯ ಹಾಗೂ ಹೊಸ ದಿಕ್ಸೂಚಿಯೊಂದಿಗೆ ಅಧಿಕಾರಿಗಳು ಇನ್ನಷ್ಟು ಜನಸ್ನೇಹಿಯಾಗಿ ಆಡಳಿತ ನಡೆಸುವ ಚಿಂತನೆಯಲ್ಲಿ ಸಭೆಯನ್ನು ಕರೆಯಲಾಗಿದೆ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News