ನಂಜನಗೂಡು: ಶಾಸಕ ಹರ್ಷವರ್ಧನ್ ಎದುರೇ ವ್ಯಕ್ತಿಗೆ ಹಲ್ಲೆ ಪ್ರಕರಣ; ನಗರಸಭೆ ಸದಸ್ಯ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Update: 2022-01-01 13:18 GMT

ಮೈಸೂರು,ಜ.1: ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಎದುರೇ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಯೊಡ್ಡಿದ ಆರೋಪಕ್ಕೆ ಸಂಬಂಧಿಸಿ ನಂಜನಗೂಡು ಬಿಜೆಪಿ ನಗರಸಭೆ ಸದಸ್ಯ ಕಪಿಲೇಶ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದೆ.

ಸಂಗೊಳ್ಳಿ  ರಾಯಣ್ಣ ಬ್ರಿಗೇಡ್ ಮುಖಂಡ ಪುಟ್ಟಸ್ವಾಮಿ ಎಂಬ ವ್ಯಕ್ತಿ ಮೇಲೆ ಡಿ.30 ರಂದು ನಂಜನಗೂಡು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಂಜನಗೂಡು ನಗರಸಭಾ ಬಿಜೆಪಿ ಸದಸ್ಯ ಕಪಿಲೇಶ್ ಮತ್ತು ಆತನ ಬೆಂಬಲಿಗರು ಎನ್ನಲಾದ  ಬಿಜೆಪಿ ಕಾರ್ಯಕರ್ತರು ರಾಘವೇಂದ್ರ ಮತ್ತು ಉಮೇಶ್ ಎಂಬುವವರು ನಾನು ಶಾಸಕ ಹರ್ಷವರ್ಧನ್ ಬಳಿ ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಬಂದು ಕತ್ತಿನಪಟ್ಟಿ ಹಿಡಿದುಕೊಂಡು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿರುವುದಲ್ಲದೇ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಡಿ.31ರಂದು ಪ್ರಕರಣದ ದಾಖಲಿಸಿಕೊಂಡಿರುವ ನಂಜನಗೂಡು ಪಟ್ಟಣ ಪೊಲೀಸರು ಆರೋಪಿ ಕಪಿಲೇಶ್, ರಾಘವೇಂದ್ರ ಮತ್ತು ಉಮೇಶ್ ಮೇಲೆ ಐಪಿಸಿ 341, 355, 323, 504, 506 ಮತ್ತು 307 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೂವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News