ಪ್ಯಾಂಗಾಂಗ್ ತ್ಸೋ ಸೇತುವೆಗೆ ಸೇತುವೆ ನಿರ್ಮಿಸುತ್ತಿರುವ ಚೀನ: ಪ್ರಧಾನಿ ಮೌನಕ್ಕೆ ರಾಹುಲ್ ಗಾಂಧಿ ತರಾಟೆ

Update: 2022-01-04 19:16 GMT

ಹೊಸದಿಲ್ಲಿ: ಗಡಿ ವಾಸ್ತವ ರೇಖೆ (ಎಲ್ಎಸಿ)ಯ ಸಮೀಪದ ಲಡಾಕ್ ನ ಪ್ಯಾಂಗಾಂಗ್ ತ್ಸೋ ಸರೋವರಕ್ಕೆ ಚೀನ ಸೇತುವೆ ನಿರ್ಮಿಸುತ್ತಿರುವ ವರದಿಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಶ್ನಿಸಿದ್ದಾರೆ.

‘‘ಪ್ರಧಾನಿ ಅವರ ಮೌನ ನಮ್ಮನ್ನು ಕಿವುಡಾಗಿಸುತ್ತಿದೆ. ನಮ್ಮ ಭೂಮಿ, ನಮ್ಮ ಜನರು, ನಮ್ಮ ಗಡಿ ಒಳಿತಿಗೆ ಅರ್ಹವಾಗಿದೆ ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ವಾಸ್ತವ ನಿಯಂತ್ರಣ ರೇಖೆಗೆ ತೀರಾ ಸಮೀಪದ ಪ್ಯಾಂಗೋಂಗ್ ತ್ಸೋ ಸರೋವರಕ್ಕೆ ಚೀನಾ ಎರಡು ತಿಂಗಳಿಂದ ಸೇತುವೆ ನಿರ್ಮಾಣ ಮಾಡುತ್ತಿದೆ ಎಂಬ ವರದಿಯನ್ನು ಅವರು ಉಲ್ಲೇಖಿಸಿದರು. ಸೇತುವೆ ಸರೋವರದ ದಕ್ಷಿಣ ಹಾಗೂ ಉತ್ತರ ದಂಡೆಯನ್ನು ಜೋಡಿಸಲಿದೆ ಎಂದು ವರದಿ ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News