ರಾಷ್ಟ್ರಪತಿಯನ್ನು ಭೇಟಿಯಾಗಿ 'ಭದ್ರತಾ ಲೋಪ'ದ ಕುರಿತು ವಿವರಿಸಿದ ಪ್ರಧಾನಿ ಮೋದಿ

Update: 2022-01-06 09:46 GMT
Photo source: Twitter/@rashtrapatibhvn

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಬುಧವಾರ ತಮ್ಮ ಪಂಜಾಬ್ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪದ ಕುರಿತು ಮಾಹಿತಿ ನೀಡಿ ಈ ಗಂಭೀರ ವಿಚಾರದ ಕುರಿತು ಅವರ ಗಮನ ಸೆಳೆದಿದ್ದಾರೆ.

ರಾಷ್ಟ್ರಪತಿಗಳ ಸೆಕ್ರಟೇರಿಯಟ್ ಈ ಕುರಿತು ಟ್ವೀಟ್ ಮಾಡಿದೆ - "ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಪ್ರಧಾನಿ ನರೇಂದ್ರ ಮೋದಿಯ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಪಂಜಾಬ್‌ನಲ್ಲಿ ನಿನ್ನೆ ನಡೆದ ಭದ್ರತಾ ಲೋಪದ ಕುರಿತು ಮಾಹಿತಿ ಪಡೆದರು. ಈ ಗಂಭೀರ ಲೋಪದ ಕುರಿತು ರಾಷ್ಟ್ರಪತಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ."

ಇದಕ್ಕೂ ಮುಂಚೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಪ್ರಧಾನಿ ಜತೆ ಮಾತನಾಡಿ ಘಟನೆ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರಲ್ಲದೆ  ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News