ಲಾಕ್ ಡೌನ್ ಒಂದೇ ಪರಿಹಾರ ಅಲ್ಲ, ಅದನ್ನು ಮಾಡುವುದೂ ಇಲ್ಲ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-01-11 09:11 GMT
ಫೈಲ್ ಚಿತ್ರ- ಗೃಹ ಸಚಿವ ಆರಗ ಜ್ಞಾನೇಂದ್ರ 

ಬೆಂಗಳೂರು: ''ಲಾಕ್ ಡೌನ್ ಒಂದೇ ಪರಿಹಾರ ಅಲ್ಲ, ಅದನ್ನೂ ನಾವು ಮಾಡುವುದೂ ಇಲ್ಲ'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿರುವ  ಗೃಹ ಸಚಿವರು, ''ಲಾಕ್ ಡೌನ್ ಒಂದೇ ಪರಿಹಾರ  ಅಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಈಗಾಗಲೇ ಮುಖ್ಯಮಂತ್ರಿಯವರೇ ಲಾಕ್ ಡೌನ್ ಮಾಡಲ್ಲ ಎಂದು ಹೇಳಿದ್ದಾರೆ. ಕೇಂದ್ರದಿಂದ ಏನು ನಿರ್ಧಾರ, ಸೂಚನೆಗಳು ಬರುತ್ತೆ ಎಂಬುದನ್ನೂ ನೋಡೋಣ'' ಎಂದು ಹೇಳಿದರು. 

ತಜ್ಞರ ಅಭಿಪ್ರಾಯಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,  ''ಸರಕಾರಕ್ಕೆ ಲಾಕ್ ಡೌನ್ ಮಾಡುವಂತ ಇರಾದೆ ಏನಿಲ್ಲ, ಆದರೆ ಕೋವಿಡ್ ನಿಯಂತ್ರಣ ಸಾಧ್ಯವಾಗದೇ ಇದ್ದಾಗ ಲಾಕ್ ಡೌನ್ ಮಾಡೋದು ಒಂದು ವಿಧಾನ. ಲಾಕ್ ಡೌನ್ ಪರಿಸ್ಥಿತಿ ಎದುರಾದಾಗ ಸಹಜವಾಗಿ ಪ್ರತಿದಿನ ಜೀವನೋಪಾಯಕ್ಕಾಗಿ ಶ್ರಮಿಸುವವರ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ಈ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ'' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News