ಕಾಂಗ್ರೆಸ್ ಪಕ್ಷದ ಪಾದಯಾತ್ರೆ ವಿರುದ್ಧ ಹೈಕೋರ್ಟ್ ಗೆ ಪಿಐಎಲ್

Update: 2022-01-11 10:47 GMT
ಫೈಲ್ ಚಿತ್ರ- ಮೇಕೆದಾಟು ಪಾದಯಾತ್ರೆ 

ಬೆಂಗಳೂರು, ಜ.11: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು ನಿವಾಸಿ ಎ.ವಿ.ನಾಗೇಂದ್ರ ಪ್ರಸಾದ್ ಎಂಬುವರು ಈ ಅರ್ಜಿ ಸಲ್ಲಿಸಿದ್ದಾರೆ. ಸರಕಾರ, ಬಿಬಿಎಂಪಿ, ರಾಮನಗರ ಜಿಲ್ಲಾಧಿಕಾರಿ, ಕೆಪಿಸಿಸಿ ಪ್ರತಿವಾದಿ ಮಾಡಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. 

ರಾಜ್ಯದಲ್ಲಿ ದಿನಂಪ್ರತಿ ಕೊರೋನ ಹೆಚ್ಚಳವಾಗುತ್ತಿದೆ. ಈ ಮಧ್ಯೆ ಪಾದಯಾತ್ರೆಯಿಂದ ಕೋವಿಡ್ ಹಬ್ಬುವ ಸಾಧ್ಯತೆಯಿದೆ. ನಿರ್ಬಂಧವಿದ್ದರೂ ಕೆಪಿಸಿಸಿ ಪಾದಯಾತ್ರೆ ಮುಂದುವರಿಸಿದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಪಾದಯಾತ್ರೆ ಮುಂದುವರಿಸದಂತೆ ಕಾಂಗ್ರೆಸ್ ಪಕ್ಷಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅರ್ಜಿ ಜ.12ರಂದು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News