ಮೈಸೂರು ನಗರ, ತಾಲೂಕಿನಾದ್ಯಂತ 1ರಿಂದ 10ನೇ ತರಗತಿ ವರೆಗೆ ಶಾಲೆ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ

Update: 2022-01-11 16:58 GMT
ಸಾಂದರ್ಭಿಕ ಚಿತ್ರ

ಮೈಸೂರು: ಕೊರೋನ ಸೋಂಕು ಹೆಚ್ಚಾಗಿ ಓಮೈಕ್ರಾನ್ ವೈರಾಣು ರೂಪಾಂತರಗೊಂಡಿರುವ ಪರಿಣಾಮ ಜ.12 ರಿಂದ ಮುಂದಿನ ಆದೇಶದ ವರೆಗೆ ಮೈಸೂರು ನಗರ ಮತ್ತು ಮೈಸೂರು ತಾಲೂಕಿನ ವ್ಯಾಪ್ತಿಯಲ್ಲಿರುವ 1ರಿಂದ 10ನೇನೇ ತರಗತಿ ಎಲ್ಲ  ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಮೈಸೂರು ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ. 

ಮೈಸೂರ ನಗರ ಮತ್ತು ಮೈಸೂರು ತಾಲೂಕಿನ ಒಂದರಿಂದ 10ನೇ ತರಗತಿ ವರೆಗಿನ ಎಲ್ಲಾಶಾಲೆಗಳ ಭೌತಿಕ ತರಗತಿಗಳನ್ನು ನಡೆಸದೆ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಿದ್ದಾರೆ.

ಮೈಸೂರು ನಗರ ಮತ್ತು ಮೈಸೂರು ತಾಲೂಕು ಹೊರತು ಪಡಿಸಿ ಜಿಲ್ಲೆಯ ಇತರ ಪ್ರದೇಶದಲ್ಲಿರುವ ಶಾಲೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಭೌತಿಕ ತರಗತಿಗಳನ್ನು ನಡೆಸಲು ಅವಕಾಶ ವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News