ಮೇಕೆದಾಟು ಪಾದಯಾತ್ರೆ: ನ್ಯಾಯಾಲಯದ ಆದೇಶ ಪಾಲಿಸಲು ಸಿದ್ಧ ಎಂದ ಸಿದ್ದರಾಮಯ್ಯ

Update: 2022-01-12 14:24 GMT

ರಾಮನಗರ: ಮೇಕೆದಾಟು ಪಾದಯಾತ್ರೆ ಕುರಿತು ನ್ಯಾಯಾಲಯದಿಂದ ಆದೇಶ ಬಂದರೆ ಅದಕ್ಕೆ ನಾವು ಗೌರವ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ 14ನೆ ತಾರೀಖು ನಡೆಯಲಿದೆ. ನಾಳೆ ಪಾದಯಾತ್ರೆ ಮಾಡಲು ತೊಂದರೆ ಇಲ್ಲ. ಹಾಗಾಗಿ ನಾಳೆ ಪಾದಯಾತ್ರೆ ಮಾಡುತ್ತೇವೆ ಎಂದರು.

ಒಂದು ವೇಳೆ ನ್ಯಾಯಾಲಯ ಪಾದಯಾತ್ರೆ ನಿಲ್ಲಿಸುವಂತೆ ಆದೇಶಿಸಿದರೆ ಅದನ್ನು ಗೌರವಿಸಿ, ಪಾಲಿಸುತ್ತೇವೆ. ಪಾದಯಾತ್ರೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆಯಾ ಎಂದು ಕೋರ್ಟ್ ಸರಕಾರವನ್ನು ಪ್ರಶ್ನೆ ಮಾಡಿದೆ, ನ್ಯಾಯಾಲಯದ ಪ್ರಶ್ನೆಗೆ ಸರಕಾರ ಉತ್ತರ ನೀಡುತ್ತದೆ ಎಂದು ಅವರು ತಿಳಿಸಿದರು.

ಪಾದಯಾತ್ರೆ, ಪ್ರತಿಭಟನೆ ಮಾಡುವಾಗೆಲ್ಲ ಸರಕಾರದ ಅನುಮತಿ ಪಡೆದು ಮಾಡುವುದಿಲ್ಲ, ಸರಕಾರದ ಗಮನಕ್ಕೆ ತಂದು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಣೆ ನೀಡಿದರು.

ನ್ಯಾಯಾಲಯದ ಆದೇಶ ಏನು ಬರುತ್ತೋ ಕಾದು ನೋಡೋಣ. ಏನೇ ಆದೇಶ ಬಂದರು ಅದನ್ನು ಉಲ್ಲಂಘನೆಯಂತೂ ಖಂಡಿತಾ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News