ತೆಲಂಗಾಣ: ಮುಖ್ಯಮಂತ್ರಿ ಕೆಸಿಆರ್ ವಿರೋಧಿಸಿದ್ದಾರೆಂದು 40ಕ್ಕೂ ಅಧಿಕ ಪತ್ರಕರ್ತರ ಬಂಧನ, ಕಿರುಕುಳ; ವರದಿ

Update: 2022-01-14 17:42 GMT

ಹೊಸದಿಲ್ಲಿ,ಜ.14: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರಕಾರ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ತೆಲಂಗಾಣದ ಕನಿಷ್ಠ 40 ಪತ್ರಕರ್ತರು ಮತ್ತು ಯೂ ಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ಪೊಲೀಸರು ಜ.6ರಂದು ವಶಕ್ಕೆ ತೆಗೆದುಕೊಂಡು ಅವರಿಗೆ ಕಿರುಕುಳ ನೀಡಿರುವುದು ವರದಿಯಾಗಿದೆ. ‌

ಈ ಪೈಕಿ ಹೆಚ್ಚಿನವರು ತಾವು ಪತ್ರಕರ್ತರೆಂದು ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ರುಜುವಾತುಗಳನ್ನು ಪ್ರಶ್ನಿಸಿದ್ದ ಪೊಲೀಸರು ಸುದ್ದಿಗಳನ್ನು ಪ್ರಸಾರಿಸಲು ಅವರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಇಲಾಖೆಯಿಂದ ಅಗತ್ಯ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಸರಕಾರದ ವಿರುದ್ಧ ಟೀಕೆಗಳನ್ನು ಮಾಡುವ ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿಯ ಅಭಿಪ್ರಾಯ ನಿರೂಪಕರ ವಿರುದ್ಧ ಹಲವಾರು ದಾಳಿಗಳು ನಡೆದಿವೆ.

ಇತ್ತೀಚಿನ ಬಂಧನಗಳ ಕುರಿತು ಮಾತನಾಡಿದ ಕಂಟೆಂಟ್ ಕ್ರಿಯೇಟರ್‌ಗಳು,ತಮಗೆ ಯಾವುದೇ ನೋಟಿಸ್ ನೀಡದೇ ಕಾನೂನು ಬಾಹಿರವಾಗಿ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಸತತವಾಗಿ ಸುಮಾರು 12 ಗಂಟೆಗಳ ಕಾಲ ತಮ್ಮನ್ನು ಪ್ರಶ್ನಿಸಿದ್ದರು ಎಂದು ಆರೋಪಿಸಿದರು. ಪೊಲೀಸರು ತಮ್ಮ ಫೋನ್‌ಗಳನ್ನು ತೆಗೆದುಕೊಂಡಿದ್ದರು ಮತ್ತು ಅವುಗಳಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂದು ಕೆಲವರು ಆಪಾದಿಸಿದರು.

ನೀವೇಕೆ ಸರಕಾರದ ವಿರುದ್ಧ ಮಾತನಾಡುತ್ತೀರಿ? ನೀವೇಕೆ ಮುಖ್ಯಮಂತ್ರಿಗಳಿಗೆ ಅಷ್ಟೊಂದು ವಿರುದ್ಧವಾಗಿದ್ದೀರಿ? ಈ ಪ್ರಶ್ನೆಗಳನ್ನು ಪೊಲೀಸರು ನಮಗೆ ಕೇಳುತ್ತಲೇ ಇದ್ದರು ’ ಎಂದು ತೆಲುಗು ಡಿಜಿಟಲ್ ಸುದ್ದಿ ವಾಹಿನಿ ಟಾಲಿವೆಲುಗುದ ವರದಿಗಾರ ಮುಶಾಂ ಶ್ರೀನಿವಾಸ್ ಅವರನ್ನು ಉಲ್ಲೇಖಿಸಿ ನ್ಯೂಸ್ ಮಿನಿಟ್ ವರದಿ ಮಾಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News