ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಜಮ್ಮು-ಕಾಶ್ಮೀರ ಪತ್ರಕರ್ತನ ಬಂಧನ

Update: 2022-01-17 07:28 GMT
Photo: twitter

ಶ್ರೀನಗರ: ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿದ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಜಾಮೀನು ನೀಡಿದ ಒಂದು ದಿನದ ನಂತರ ಜಮ್ಮು ಹಾಗೂ ಕಾಶ್ಮೀರ ಆಡಳಿತವು ಪತ್ರಕರ್ತ ಸಜ್ಜಾದ್ ಗುಲ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ(ಪಿಎಸ್ ಎ) ಬಂಧಿಸಿದೆ.

ಪಿಎಸ್ ಎ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು 3 ರಿಂದ 6 ತಿಂಗಳವರೆಗೆ ವಿಚಾರಣೆಯಿಲ್ಲದೆ ಬಂಧಿಸಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಬಂಧಿತನನ್ನು ದೀರ್ಘಕಾಲದವರೆಗೆ ಜೈಲಿನಲ್ಲಿ ಇರಿಸಲು ಪಿಎಸ್ ಎ ಅನ್ನು ಪದೇ ಪದೇ ಬಳಸಲಾಗುತ್ತದೆ.

ಪತ್ರಕರ್ತನನ್ನು ಜಮ್ಮುವಿನ ಕೋಟ್ ಬಲ್ವಾಲ್ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಜ್ಜಾದ್ ಗುಲ್ ನ್ಯೂಸ್ ಪೋರ್ಟಲ್‌ ನಲ್ಲಿ  ಕೆಲಸ ಮಾಡುತ್ತಿದ್ದು, ಇತ್ತೀಚಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಕಲಿ ಟ್ವೀಟ್‌ಗಳ ಮೂಲಕ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ದೇಶ ವಿರೋಧಿ ಘೋಷಣೆಗಳಿರುವ ಆಕ್ಷೇಪಾರ್ಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

"ಅವರ ಒಟ್ಟಾರೆ ಚಟುವಟಿಕೆಗಳು ಭಾರತದ ಸಾರ್ವಭೌಮತೆ, ಸಮಗ್ರತೆ ಹಾಗೂ  ಏಕತೆಗೆ ಹಾನಿಕಾರಕವಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News