ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ; ಕೇಂದ್ರ ಸರ್ಕಾರ ಕ್ಷಮೆ ಯಾಚಿಸಲಿ -ಹರೀಶ್ ಕುಮಾರ್

Update: 2022-01-17 12:07 GMT

ಮಂಗಳೂರು: ಗಣರಾಜ್ಯೋತ್ಸವ ದಿನದ ಪರೇಡ್ ಗೆ ಕೇರಳ ಸರಕಾರ ಮೂಲಕ ಬಂದಿರುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಅವರಂತಹ ಮಹಾನ್ ಚೇತನಕ್ಕೆ ಮಾಡಿರುವ ಅವಮಾನ, ಅದಕ್ಕಾಗಿ ಕೇಂದ್ರ ಸರಕಾರ ಜನತೆಯ ಕ್ಷಮೆ ಯೋಚಿಸಬೇಕು ಮತ್ತು ಕೇರಳ ಸರಕಾರದ ಪ್ರಸ್ತಾವನೆ ಯನ್ನು ಪುನರ್ ಪರಿಶೀಲಿಸಬೇಕು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸುದ್ದಿ ಗೋಷ್ಠಿಯಲ್ಲಿಂದು ಆಗ್ರಹಿಸಿದರು.

ಜಾತಿ, ತಾರತಮ್ಯದ ಶ್ರೇಣೀಕೃತ ಸಮಾಜದಲ್ಲಿ  ಅಸಮಾನತೆ ತುಂಬಿದ್ದ ಕೇರಳದಲ್ಲಿ ಒಂದೇ ಜಾತಿ, ಒಂದೇ ಮತ ಒಂದೇ ದೇವರು  ಎಂದು ಸಮಾನತೆಯ ಸಮಾಜ ನಿರ್ಮಾಣದ ಸಂದೇಶವನ್ನು ಜಗತ್ತಿಗೆ ನೀಡಿದ ಬ್ರಹ್ಮ ಶ್ರೀ ನಾರಾಯಣ ಗುರುಗಳು ವಿಶ್ವ ಮಾನ್ಯತೆ ಪಡೆದವರು. ಅವರ ಬಗ್ಗೆ ಕೇಂದ್ರ ಸರಕಾರ ಈ ಹಿಂದೆಯೂ ನಿರ್ಲಕ್ಷ್ಯ ವಹಿಸಿದೆ. ಈಗಲಾದರೂ  ಸರಕಾರ ಈ ಬಗ್ಗೆ ಗಮನಹರಿಸಿ ಪರೇಡ್ ನಲ್ಲಿ ಕೇರಳ ಸರಕಾರದ ಪ್ರಸ್ತಾವನೆ ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ದ.ಕ ಜಿಲ್ಲಾ ಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ  ಮಾಜಿ ಶಾಸಕ ಜೆ.ಆರ್.ಲೋಬೊ, ಕಾಂಗ್ರೆಸ್ ಪದಾಧಿಕಾರಿಗಳಾದ ನವೀನ್ ಡಿ.ಸೋಜ, ಪ್ರಕಾಶ್ ಸಾಲ್ಯಾನ್, ಕೇಶವ ಮರೋಳಿ, ಶೋಭ, ತಶಾಂತಲಾ,ವಿಶ್ವಾಸ್ ದಾಸ್, ಟಿ.ಕೆ.ಸುಧೀರ್, ನೀರಜ್ ಪಾಲ್, ಶೇಖರ ಪೂಜಾರಿ, ರಮಾನಂದ, ಆರಿಫ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News