ಸಕಲೇಶಪುರ: ಅಟ್ರಾಸಿಟಿ ಕಾಯ್ದೆ ದುರ್ಬಳಕೆ; ಒಂದು ವರ್ಷದಲ್ಲಿ 17 ಮಂದಿಯ ವಿರುದ್ಧ ದಲಿತ ದೌರ್ಜನ್ಯ ಕೇಸು ದಾಖಲು

Update: 2022-01-17 17:17 GMT
ಸಾಂದರ್ಭಿಕ ಚಿತ್ರ

ಸಕಲೇಶಪುರ : ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಯನ್ನು ದುರ್ಬಳಕೆ ಮಾಡಿಕೊಂಡು ಕಳೆದ ಒಂದು ವರ್ಷದಲ್ಲಿ 17 ಜನ ಮುಸ್ಲಿಮರ ಮೇಲೆ  ಕೇಸು ದಾಖಲು ಮಾಡಿದ್ದಾರೆ.

ಮುಸ್ಲಿಮರನ್ನು ದಮನಿಸಲೆಂದೇ ಅಟ್ರಾಸಿಟಿ ಕಾಯ್ದೆಯನ್ನು ಅಸ್ತ್ರವನ್ನಾಗಿಸಿಕೊಂಡಿರುವ ಬಲಪಂಥೀಯ  ಸಂಘಟನೆಗಳು ,ದಲಿತ ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಅಟ್ರಾಸಿಟಿ ಕೇಸ್ ಗಳನ್ನು ದಾಖಲಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಅಟ್ರಾಸಿಟಿ ಕೇಸ್ ದಾಖಲಾಗಿರುವ ಹೆಚ್ಚಿನ  ಪ್ರಕರಣಗಳಲ್ಲಿ   ಬಲಪಂಥೀಯ  ಸಂಘಟನೆಗಳು ಕಾಲು ಕೆರೆದುಕೊಂಡು ಜಗಳಕ್ಕೆ ನಿಂತು ಹಲ್ಲೆ ನಡೆಸಿರುವುದೇ ಹೆಚ್ಚು.   ಒಟ್ಟು ಮೂರು ಪ್ರಕರಣಗಳಲ್ಲಿ 17 ಜನರ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಿದ್ದು,  ಮೊದಲನೇ ಪ್ರಕರಣದಲ್ಲಿ ಒಬ್ಬರ ಮೇಲೆ, ಎರಡನೇ ಪ್ರಕರಣದಲ್ಲಿ 9 ಜನರ ಮೇಲೆ ಹಾಗೂ ಮೂರನೇ ಪ್ರಕರಣದಲ್ಲಿ 7 ಜನರ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಿದೆ.

ಮೊದಲನೇ ಪ್ರಕರಣ:

ಪುರಸಭೆ ಅಧ್ಯಕ್ಷರ ಮೇಲೆ  ದಲಿತ ದೌರ್ಜನ್ಯ ಕಾಯ್ದೆಯನ್ನು ಬಳಸಿ ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಝ್ ರವರ  ಮೇಲೆ ದಾಖಲಿಸಿದ್ದರು. ಸೈಯದ್ ಮುಫೀಝ್  ತಮ್ಮ ಹಿಡುವಳಿ ಜಾಗದಲ್ಲಿ ವಾಸದ ಮನೆ ನಿರ್ಮಿಸುತ್ತಿರುವ ವಿಚಾರಕ್ಕೆ ಬಲಪಂಥೀಯ  ಸಂಘಟನೆಯ ಕಾರ್ಯಕರ್ತರ ಸಂಬಂಧ ಹೊಂದಿರುವ  ವ್ಯಕ್ತಿಯೊಬ್ಬ ಮುಫೀಝ್  ವಿರುದ್ಧ  ಪುರಸಭೆ ಹಾಗೂ  ಕಂದಾಯ ಇಲಾಖೆಗೆ ದೂರು ಅರ್ಜಿ ಸಲ್ಲಿಸಿದ್ದರು, ಇದನ್ನೆಲ್ಲ ಪರಿಶೀಲಿಸಿದ ಇಲಾಖೆಗಳು ಹಿಡುವಳಿ ಜಾಗದಲ್ಲಿ ಮನೆ ಕಟ್ಟುತ್ತಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲು ಸಾದ್ಯವಿಲ್ಲ ಎಂದು ತಿಳಿಸಿದ್ದಾರೆ.

ಹತಾಶನಾದ ದೂರುದಾರ ತನ್ನನ್ನು ಜಾತಿ ನಿಂದನೆ ಮಾಡಿದ ಎಂದು ಪೊಲೀಸರಿಗೆ ದೂರ ನೀಡಿದ್ದ, ಈ ಹಿನ್ನೆಲೆಯಲ್ಲಿ ಸೈಯದ್ ಮುಫೀಝ್  ವಿರುದ್ಧ  ಅಟ್ರಾಸಿಟಿ ಕೇಸ್ ದಾಖಲಾಗಿತ್ತು.

ಈ ವಿಚಾರದಲ್ಲಿ ಕೆಲವು ದಲಿತ ಸಂಘಟನೆಗಳು  ಈ ಪ್ರಕರಣ ಮುಸ್ಲಿಮರ ಮತ್ತು ದಲಿತರ ಮಧ್ಯೆ ಕಂದಕ ವಾಗದಂತೆ ಮುನ್ನೆಚ್ಚರಿಕೆ ವಹಿಸಿದರು. ಅಲ್ಲದೆ ಇದು ವೈಯಕ್ತಿಕ ಪ್ರಕರಣವೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೈಯದ್ ಮುಸ್ಲಿಂ ಪರವಾಗಿ ಕೆಲವು ಮುಸ್ಲಿಂ ಸಂಘಟನೆಗಳ ಪ್ರಮುಖರು ಪೊಲೀಸ್ ಇಲಾಖೆ ಅಧಿಕಾರಿಗೆ ಭೇಟಿ ನೀಡಿ ದಲಿತ ದೌರ್ಜನ್ಯ ಕಾಯ್ದೆಯ ದುರ್ಬಳಕೆ ಬಗ್ಗೆ ಮನವರಿಕೆ ಮಾಡಿ ಇಂತಹ ಪ್ರಕರಣಗಳು ಮರುಕಳಿಸದಂತೆ ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಎರಡನೇ ಪ್ರಕರಣ:

ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಬಕ್ರೀದ್  ಸಂದರ್ಭದಲ್ಲಿ ದನಗಳನ್ನು ಇಬ್ಬರು  ದಲಿತ ಜನಾಂಗದ ವ್ಯಕ್ತಿಗಳು. ಇನ್ನೊಬ್ಬರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ. ಇಬ್ಬರು  ದಲಿತರ ಮೇಲೆ ಬಲಪಂಥೀಯ  ಸಂಘಟನೆಗಳ ಸುಮಾರು 15 ಕ್ಕೂ ಹೆಚ್ಚು ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಇದನ್ನು ಕಂಡ ಸ್ಥಳೀಯರು ಹಲ್ಲೆ ಮಾಡುವುದನ್ನು ತಡೆದು ರಕ್ಷಣೆಮಾಡುವ ಈ ಸಂದರ್ಭದಲ್ಲಿ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿತ್ತು ಈ ಪ್ರಕರಣದಲ್ಲಿ ದಲಿತ ಯುವಕನ ಮೂಲಕ  9 ಜನ ಮುಸ್ಲಿಮರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಕೇಸು ದಾಖಲು ಮಾಡಲಾಗಿತ್ತು.

ಮೂರನೇ ಪ್ರಕರಣ:

ತಾಲೂಕಿನ ಮಾರನಹಳ್ಳಿ ಗ್ರಾಮದ ಸಮೀಪದ  ಹೋಟೆಲ್ ನಲ್ಲಿ ದನದ ಮಾಂಸದ ಖ್ಯಾದ ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಲಪಂಥೀಯ  ಸಂಘಟನೆಗಳ ಕಾರ್ಯಕರ್ತರು ದಾಂದಲೆ ನಡೆಸಿದ್ದರು. ಹೋಟೆಲ್ ಸಬ್ಬಂದಿ ಹಾಗೂ ಬಲಪಂಥೀಯ  ಸಂಘಟನೆಗಳ ಮಧ್ಯೆ ಮಾರಮಾರಿ ನಡೆದಿತ್ತು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಮುಸ್ಲಿಮರ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಿದೆ.

ಈ ಪ್ರಕರಣದಲ್ಲಿ ದಲಿತ ವ್ಯಕ್ತಿಯ ಮುಖಾಂತರ ದೂರು ನೀಡಲಾಗಿದೆ.

ದೇವಸ್ಥಾನ ದ್ವಂಸದ ಸುಳ್ಳು ಪ್ರಕರಣ:

ತಾಲೂಕಿನ ಬಾಳ್ಳು ಪೇಟೆಯ ರಾಜೇಂದ್ರ ಪುರ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಲಪಂಥೀಯ  ಸಂಘಟನೆಗಳು ಬಾಳು ಪೇಟೆಯಿಂದ ರಾಜೇಂದ್ರ ಗ್ರಾಮದವರಗೆ  ರ್ಯಾಲಿಯೊಂದನ್ನು ಹಮ್ಮಿಕೊಂಡು ಮುಸ್ಲಿಮ್ ಯುವಕರು ದೇವಸ್ಥಾನವನ್ನು ದ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಲು ರಾಜೇಂದ್ರ ಪುರದ ಇಬ್ಬರು  ದಲಿತ ಯುವಕರನ್ನು ಬಳಸಿಕೊಂಡು ಸುಳ್ಳು ಕೇಸನ್ನು ದಾಖಲಿಸಿದ್ದಾರೆ.

ದಲಿತರನ್ನು ದುರ್ಬಳಕೆ ಮಾಡಿಕೊಂಡು ಬಲಪಂಥೀಯ  ಸಂಘಟನೆಗಳು ಮುಸ್ಲಿಮರ ಮೇಲೆ ಅಟ್ರಾಸಿಟಿ ಕೇಸು  ಅಂಕಿಅಂಶಗಳು ಲಭ್ಯವಾಗಿದೆ. ಇದು  ದುರದೃಷ್ಟಕರ ಒಂದು ಕೊಮಿನ ವಿರುದ್ಧ ಕುತಂತ್ರ ನಡೆಸಿ, ದಮನ ಮಾಡಲು ಈ ರೀತಿಯಾಗಿ ಮಾಡಲಾಗುತ್ತಿದೆ ಹಾಗೂ ದಲಿತರ ಮತ್ತು ಮುಸ್ಲಿಮರ ಮಧ್ಯೆ ತಾಲೂಕಿನಲ್ಲಿ ಸಹೋದರತ್ವದ ಮಾನವೀಯ ಸಂಬಂಧವಿದೆ. ಈ  ಸಂಬಂಧದಲ್ಲಿ ಬಿರುಕು ಮೂಡಿಸಲು ಈ ರೀತಿಯ ತಂತ್ರಗಾರಿಕೆ ನಡೆಸಲಾಗುತ್ತಿದೆ. ದಲಿತ ಸಮಾಜ ಈ ವಿಚಾರವನ್ನು  ಗಂಭೀರವಾಗಿ ಪರಿಗಣಿಸಿ, ಚರ್ಚಿಸಿ ಸಮಾಜಮುಖಿಯಾದ ನಿರ್ಣಯವೊಂದನ್ನು ಕೈಗೊಳ್ಳುತ್ತದೆ.

ಸ್ಟೀವನ್ ಪ್ರಕಾಶ್ -ದಲಿತ ಮುಖಂಡ , ಸಕಲೇಶಪುರ

ಕೊಮುವಾದಿಗಳು ಇಂತಹ ಕುತಂತ್ರಗಳಿಗೆ ಕುಖ್ಯಾತಿಯಾಗಿದ್ದಾರೆ.  ಈ ಮೂಲಕ ಸಕಲೇಶಪುರದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಮುಂದಾಗಿದ್ದಾರೆ. ದಲಿತರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವಂತಹ ಹಾಗೂ ಮುಸ್ಲಿಮರು ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬಂತಹ ಚಿತ್ರಣವನ್ನು ಬಿಂಬಿಸಲು ಈ ರೀತಿಯಾದ ತಂತ್ರಗಾರಿಕೆ ನಡೆಸುತ್ತಿದ್ದಾರೆ.  ಇದಕ್ಕೆ ಸಕಲೇಶಪುರದ ಜನತೆ ಅವಕಾಶ ನೀಡುವುದಿಲ್ಲ ಸರ್ವ ಸಂಘಟನೆಗಳು, ಸಮಾನ ಮನಸ್ಕರು ಸಂವಿಧಾನಾತ್ಮಕವಾಗಿ ಈ ಬಗ್ಗೆ  ಚರ್ಚಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು.

ಧರ್ಮೇಶ್ , ಜಿಲ್ಲಾ ಕಾರ್ಯದರ್ಶಿ -ಸಿಪಿಐಎಂ ಹಾಸನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News