ರಾಜ್ಯದಲ್ಲಿ ಮಂಗಳವಾರ 41,457 ಕೊರೋನ ಪ್ರಕರಣ ದೃಢ, 20 ಮಂದಿ ಸಾವು

Update: 2022-01-18 16:17 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 41,457 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 20 ಜನರು ಸೋಂಕಿಗೆ ಬಲಿಯಾಗಿದ್ದು, 8,353 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 32,88,700ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 38,465ಕ್ಕೆ ತಲುಪಿದೆ. 

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 2,50,381ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

20 ಸೋಂಕಿತರು ಬಲಿ: ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 7, ಚಾಮರಾಜನಗರ 1, ಚಿತ್ರದುರ್ಗ 1, ದಾವಣಗೆರೆ 1, ಧಾರವಾಡ 1, ಹಾಸನ 1, ಮೈಸೂರು 3, ರಾಮನಗರ 1, ತುಮಕೂರು 2, ಉತ್ತರಕನ್ನಡ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 41,457 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 58, ಬಳ್ಳಾರಿ 714, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 1,116, ಬೆಂಗಳೂರು ನಗರ 25,595, ಬೀದರ್ 235, ಚಾಮರಾಜನಗರ 198, ಚಿಕ್ಕಬಳ್ಳಾಪುರ 358, ಚಿಕ್ಕಮಗಳೂರು 362, ಚಿತ್ರದುರ್ಗ 402, ದಕ್ಷಿಣಕನ್ನಡ 1058, ದಾವಣಗೆರೆ 257, ಧಾರವಾಡ 726, ಗದಗ 150, ಹಾಸನ 1739, ಹಾವೇರಿ 44, ಕಲಬುರಗಿ 514, ಕೊಡಗು 89, ಕೋಲಾರ 481, ಮಂಡ್ಯ 895, ಮೈಸೂರು 1848, ರಾಯಚೂರು 205, ರಾಮನಗರ 379, ಶಿವಮೊಗ್ಗ 306, ತುಮಕೂರು 1731, ಉಡುಪಿ 801, ಉತ್ತರಕನ್ನಡ 587, ವಿಜಯಪುರ 53, ಯಾದಗಿರಿ ಜಿಲ್ಲೆಯಲ್ಲಿ 55 ಪ್ರಕರಣ ಪತ್ತೆಯಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News