ಬ್ಯಾರೀಸ್ ಪಾಲಿಟೆಕ್ನಿಕ್ ನಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ 'ಸ್ಟೆಮ್-2022' ಕಾರ್ಯಾಗಾರ

Update: 2022-01-19 06:29 GMT

ಮಂಗಳೂರು, ಜ.19: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವಂತಹ ಬ್ಯಾರೀಸ್ ತಾಂತ್ರಿಕ ಸಂಸ್ಥೆಯ ಭಾಗವಾದ ಬ್ಯಾರೀಸ್ ಪಾಲಿಟೆಕ್ನಿಕ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶೈಕ್ಷಣಿಕ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿಜ್ಞಾನ, ತಂತ್ರಜ್ಞಾನ, ನಿರ್ಮಾಣ ಮತ್ತು ಗಣಿತದ(STEM-2022) ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಬಿಐಟಿ ಕಾಲೇಜು ಆಯೋಜಿಸುತ್ತದೆ ಈ ಬಾರಿ ನಡೆದ ಕಾರ್ಯಗಾರದಲ್ಲಿ ಎಸ್ ಜೆಇ ಕಾಲೇಜ್ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಶೆರಿಲ್ ಗ್ರೇಸ್ ಕೊಲಾಸೋ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರ ನಡೆಸಿಕೊಟ್ಟರು.

ಬ್ಯಾರೀಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಫ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಐ.ಮಂಜೂರ್ ಬಾಶಾ ಸಂಸ್ಥೆಯ ಪರಿಚಯ  ನೀಡಿದರು.

ಬ್ಯಾರೀಸ್ ಆರ್ಕಿಟೆಕ್ಚರ್ ಕಾಲೇಜಿನ ಪ್ರಾಂಶುಪಾಲ ಆರ್ಕಿಟೆಕ್ಟ್ ಅಶೋಕ್ ಮೆಂಡೋನ್ಸ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತರಾಗಿರಬೇಕೆಂದು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ನೆರೆಹೊರೆಯ ಪ್ರೌಢಶಾಲೆಗಳ ನೂರಾರು ಎಸೆಸೆಲ್ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News