`ಕೋವಿಡ್' ಕಂಟೈನ್ಮೆಂಟ್ ಝೋನ್ ಮಾರ್ಗಸೂಚಿ ಪರಿಷ್ಕರಣೆ

Update: 2022-01-19 19:43 GMT

ಬೆಂಗಳೂರು, ಜ. 19: ರಾಜ್ಯದಲ್ಲಿ ಕೋವಿಡ್ ರೂಪಾಂತರ ಒಮೈಕ್ರಾನ್ ಸೋಂಕಿನ ಮೂರನೇ ಅಲೆ ವೇಗವಾಗಿ ಹರಡುತ್ತಿದ್ದು, ಸೋಂಕು ಹೆಚ್ಚಿರುವ ಕಂಟೈನ್ಮೆಂಟ್ ವಲಯದ ಮಾರ್ಗಸೂಚಿ ಪರಿಷ್ಕರಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ನಗರ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದರೆ ಕ್ಲಸ್ಟರ್ ಎಂದು ಪರಿಗಣಿಸಬೇಕು. 15 ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ದೊಡ್ಡ ಕ್ಲಸ್ಟರ್ ಪ್ರದೇಶ. ಒಂದು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕು. ಬಿಬಿಎಂಪಿ, ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.

ಮೈಕ್ರೋ ಕಂಟೈನ್ಮೆಂಟ್, ಕಂಟೈನ್ಮೆಂಟ್ ವಲಯಗಳಲ್ಲಿ ಖಚಿತ ಕೋವಿಡ್ ಪ್ರಕರಣಗಳು ವರದಿಯಾದ ಏಳು ದಿನಗಳ ನಂತರ ಯಾವುದೆ ಖಚಿತ ಪ್ರಕರಣಗಳು ವರದಿಯಾಗದಿದ್ದಲ್ಲಿ ಆಯಾ ಮೈಕ್ರೋ ಕಂಟೈನ್ಮೆಂಟ್, ಕಂಟೈನ್ಮೆಂಟ್ ವಲಯದಿಂದ ಮುಕ್ತಗೊಳಿಸಬಹುದು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News