ಉಡುಪಿ : 2 ದಿನಗಳ 1450 ಕೋವಿಡ್ ಸೋಂಕಿತರಲ್ಲಿ 803 ಮಂದಿ ವಿದ್ಯಾರ್ಥಿಗಳು

Update: 2022-01-20 16:12 GMT

ಉಡುಪಿ, ಜ.20: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌ಗೆ ಪಾಸಿಟಿವ್ ಬರುವವರ ಸಂಖ್ಯೆಯಲ್ಲಿ ಹಠಾತ್ ವೃದ್ಧಿ ಕಂಡುಬಂದಿದ್ದು, ಅದೇ ರೀತಿ ಸೋಂಕು ಪತ್ತೆಯಾಗುತ್ತಿರುವ ಪುಟಾಣಿ ಮಕ್ಕಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಬುಧವಾರ 683 ಮಂದಿ ಪಾಸಿಟಿವ್ ಬಂದಿದ್ದರೆ ಇವರಲ್ಲಿ 327 ಮಂದಿ 0-5 ಮಕ್ಕಳು ಹಾಗೂ 25ವರ್ಷದೊಳಗಿನ ವಿವಿಧ ವರ್ಗದ ವಿದ್ಯಾರ್ಥಿಗಳಿದ್ದಾರೆ. ಅದೇ ರೀತಿ ಇಂದು 767 ಮಂದಿ ಪಾಸಿಟಿವ್ ಬಂದಿದ್ದರೆ ಇವರಲ್ಲಿ 476 ಮಂದಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಎಂದು ಆರೋಗ್ಯ ಇಲಾಖೆ ನೀಡಿದ ಮಾಹಿತಿ ತಿಳಿಸಿದೆ.

ಎರಡು ದಿನಗಳಲ್ಲಿ 0-5 ವರ್ಷದೊಳಗಿನ ಮಕ್ಕಳು 24(13+11), 6ರಿಂದ 10ವರ್ಷದೊಳಗಿನ 132 (65+67), 11ರಿಂದ 15ವರ್ಷದೊಳಗಿನ 253 (112+141), 16ರಿಂದ 20ವರ್ಷದೊಳಗಿನ 245 (72+173) ಹಾಗೂ 21ರಿಂದ 25ವರ್ಷದೊಳಗಿನ 149(65+84) ಮಂದಿ ವಿದ್ಯಾರ್ಥಿಗಳಿದ್ದಾರೆ.

ಕಳೆದ ಜ.18ರಂದು 801 ಮಂದಿ ಜಿಲ್ಲೆಯಲ್ಲಿ ಪಾಸಿಟಿವ್ ಬಂದಿದ್ದು, ಇವರಲ್ಲಿ 148 ಮಂದಿ ವಿದ್ಯಾರ್ಥಿ ಮಕ್ಕಳಿದ್ದಾರೆ. 17ರಂದು 442 ಪಾಸಿಟಿವ್ ಬಂದವರಲ್ಲಿ 198 ಮಂದಿ ವಿದ್ಯಾರ್ಥಿಗಳೆಂದು ಮಾಹಿತಿ ತಿಳಿಸಿದೆ.

ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ, ಪ್ರೌಡ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News