ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

Update: 2022-01-22 16:25 GMT
ದರ್ಶನ್

ಚಾಮರಾಜನಗರ: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನೋರ್ವನ  ಸಾವಿನ ಬಳಿಕ ಅಂಗಾಂಗ ದಾನ ಮಾಡುವ ಮೂಲಕ ಯುವಕನ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿ ಗ್ರಾಮದ  ಮಹದೇವ ಮತ್ತು ವಸಂತಮ್ಮ ನವರ ಮೊದಲನೇ ಪುತ್ರನಾದ ದರ್ಶನ್ ( 24 )ಗೆ ಜನವರಿ 18ರಂದು ರಸ್ತೆ ಅಪಘಾತವಾಗಿತ್ತು. ಬಳಿಕ ಮೈಸೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಮೆದುಳು ನಿಷ್ಕ್ರಿಯವಾಗಿದ್ದ ಹಿನ್ನೆಲೆ ಅಂಗಾಂಗ ದಾನ ಮಾಡಿ ಐವರಿಗೆ ಮರುಜೀವ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿ ಗ್ರಾಮದ ದರ್ಶನ್ ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಈತನಿಗೆ ಮೂರುವರ್ಷದ ಹಿಂದೆ ವಿವಾಹವು ಆಗಿತ್ತು ನಂತರ ಮೂರು ತಿಂಗಳ ಮಗುವಿಗೆ ತಂದೆಯಾಗಿ ಸಂತೋಷದಿಂದಿದ್ದ ದರ್ಶನ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ ಆದ್ರೆ ಅವರ ಸಾರ್ಥಕ ಕೆಲ್ಸ ಮಾತ್ರ ಜನಮಾನಸದಲ್ಲಿ ಉಳಿಯಲಿದೆ.

ಯುವಕನ ಹೃದಯವನ್ನ ತಮಿಳುನಾಡಿನ ಚೆನೈನ ಎಂಜಿಎಂ ಹೆಲ್ತ್ ಕೇರ್ ಗೆ ರವಾಣಿಸಲಾಗಿದ್ದು, ಒಂದು ಕಿಡ್ನಿ ಮತ್ತು ಯಕೃತ್ ನ್ನ ಬಿಜಿಎಸ್ ಆಸ್ಪತ್ರೆಯಲ್ಲಿಯೇ ಕಸಿ ಮಾಡಲಾಗಿದ್ದು ಕಾರ್ನಿಯ ಅಂಗವನ್ನು ಮೈಸೂರಿನ ನೇತ್ರ ಬ್ಯಾಂಕಿಗೆ ನೀಡಲಾಗಿದೆ ಎಂದು ಮೈಸೂರಿನ ಅಪೋಲೊ ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್. ಜಿ.ಭರತೀಶ್ ತಿಳಿಸಿದ್ದಾರೆ.

ಅಂಗಾಂಗ ದಾನ ಮಾಡಿದ ದರ್ಶನ್ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡುವ ವೇಳೆ  ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಎರಡು ಬದಿಯಲ್ಲಿ ಸಾಲಾಗಿ ನಿಂತು ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News