ಮೈಸೂರು: ಬಾಳೆ ತೋಟದ ಸೋಲಾರ್ ತಂತಿಗೆ ಸಿಲುಕಿ ನರಳಾಡಿದ ಚಿರತೆ; ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

Update: 2022-01-23 15:42 GMT

ಮೈಸೂರು,ಜ.23: ಬಾಳೆ ತೋಟದಲ್ಲಿ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಚಿರತೆಯ ಬಲಗಾಲು ಸಿಲುಕಿದ ಪರಿಣಾಮ ಚಿರತೆಯೊಂದು ನರಳಾಡಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಜಾಲಹಳ್ಳಿ ಮತ್ತು ಮುಳ್ಳೂರು ಗ್ರಾಮದ ಮಧ್ಯೆ ಇರುವ ಬಾಳೆತೋಟದಲ್ಲಿ ಈ ಘಟನೆ ನಡೆದಿದ್ದು, ಚಿರತೆಯ ಬಲಗಾಲು ಸಿಲುಕಿರುವ ಪರಿಣಾಮ ಚಿರತೆ ಚೀರಾಟಗೊಂಡಿದೆ.

ಸೋಲಾರ್ ತಂತಿಯಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ 4 ವರ್ಷದ ಗಂಡು ಚಿರತೆ ಚೀರಾಟ ನಡೆಸಿದೆ. ತಕ್ಷಣ ಸ್ಥಳೀಯರು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನುಗು ಅರಣ್ಯ ಇಲಾಖೆಯ ಆರ್‍ಎಫ್‍ಓ ಗಮಕ್ಕೆ ತಂದಿದ್ದಾರೆ.

 ನಂತರ ಹೆಡಿಯಾಲ ಅರಣ್ಯ ಇಲಾಖೆ ಎಸಿಎಫ್ ಗಮನಕ್ಕೆ ತರಲಾಗಿದ್ದು, ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಅರವಳಿಕೆ ಮದ್ದನ್ನು ನೀಡಿ ಚಿಕಿತ್ಸೆ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು  ಅರಣ್ಯದೊಳಕ್ಕೆ ಚಿರತೆಯನ್ನು  ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News