ದೇಶದಲ್ಲಿ ದುರ್ಬಲ ಆರ್ಥಿಕ ನೀತಿ ಅಸ್ತಿತ್ವದಲ್ಲಿದೆ: ಬರಗೂರು ರಾಮಚಂದ್ರಪ್ಪ

Update: 2022-01-23 16:14 GMT

ಬೆಂಗಳೂರು, ಜ. 23: `ದೇಶದ ಜನರು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದರೆ, ಇದೇ ವೇಳೆ ನಮ್ಮ ದೇಶದ ಬಿಲೇನಿಯರ್‍ಗಳ ಆಸ್ತಿ ಹೆಚ್ಚಾಗುತ್ತಿದೆ. ಇದು ದೇಶದ ದುರ್ಬಲ ಆರ್ಥಿಕ ನೀತಿಯನ್ನು ತೋರಿಸುತ್ತದೆ' ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಬಂಡಾಯ ಸಾಹಿತ್ಯ ಸಂಘಟನೆಯು ಆಯೋಜಿಸಿದ್ದ `ನಿರುದ್ಯೋಗ ಸಮಸ್ಯೆ ಮತ್ತು ಸವಾಲು' ಎಂಬ ಆನ್‍ಲೈನ್ ಸಂವಾದದಲ್ಲಿ ಮಾತನಾಡಿದ ಅವರು, `ಇತೀಚೆಗೆ ದೇಶ ಕೊರೋನ ವೈರಸ್‍ನಿಂದ ಮಾತ್ರ ಬಳಲುತ್ತಿಲ್ಲ, ಬದಲಾಗಿ ಅಸಮಾನತೆಯ ವೈರಸ್‍ನಿಂದ ಬಳಲುತ್ತಿದೆ. ಎರಡು ವರ್ಷಗಳಿಂದ ಉಳ್ಳವರ ಆದಾಯ ಹೆಚ್ಚುತ್ತಿದೆ ಹೊರತು, ಸಂಖ್ಯೆ ಹೆಚ್ಚುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಇಲ್ಲದವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕಂದಕಕ್ಕೆ ದೇಶದಲ್ಲಿ ಏಕಮುಖ ಆರ್ಥಿಕ ನೀತಿ ಕಾರಣವಾಗಿದೆ. ಇದು ಜಾಗತೀಕರಣ ಫಲಿತವಾಗಿದೆ' ಎಂದು ಹೇಳಿದರು. 

`ನಿರುದ್ಯೋಗ ಎಂಬುದು ಒಂದೇ ಆಯಾಮದ ಸಮಸ್ಯೆಯಲ್ಲ. ನಿರುದ್ಯೋಗ ಎಂದ ಕೂಡಲೇ ದೇಶದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಆಯಾಮಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಆರ್ಥಿಕತೆ, ನಿರುದ್ಯೋಗ ಹಾಗೂ ಹಸಿವಿಗೆ ನೇರ ಸಂಬಂಧವಿದೆ. ಹಸಿವನ್ನು ನೀಗಿಸುವುದೇ ಉದ್ಯೋಗದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಿರುದ್ಯೋಗ ಮತ್ತು ಜೀವಿಸುವ ಹಕ್ಕಿಗೆ ಸಂಬಂಧವಿದೆ. ಹೀಗೆ ನಿರುದ್ಯೋಗ ವಿವಿಧ ಆಯಾಮಗಳನ್ನು ಹೊಂದಿದೆ' ಎಂದು ಅವರು ವಿಶ್ಲೇಷಿಸಿದರು. 

`45 ವರ್ಷಗಳಿಂದ ದೇಶದಲ್ಲಿ ಹೆಚ್ಚು ನಿರುದ್ಯೋಗವನ್ನು ಸೃಷ್ಟಿಯಾಗಿದೆ. ಸರಕಾರಗಳು ಇದನ್ನು ಒಪ್ಪುವುದಿಲ್ಲ. ಆದರೆ ಇದು ವಾಸ್ತವವಾಗಿದೆ. ಕೊರೋನ ಸಂಕಷ್ಟದ ಕಾಲಘಟ್ಟದಲ್ಲಯೇ ಸಂಘಟಿತ ವಲಯದಲ್ಲಿ ಕೆಸಲವನ್ನು ಕಳೆದುಕೊಂಡಿದ್ದಾರೆ. ಆದರೆ ಸರಕಾರವು ಇದನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದೇ ವಿಪರ್ಯಾಸವಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು. 

`ಖಾಸಗೀಕರಣ ಬಂದಾಗ ಉದ್ಯೋಗದಲ್ಲಿ ಅಭದ್ರತೆ ಉಂಟಾಯಿತು. ಉದ್ಯೋಗದ ಅಭದ್ರತೆಯೇ ಖಾಸಗೀಕರಣ ಮೂಲಧ್ಯೇಯವಾಗಿದೆ. ದೇಶದಲ್ಲಿ ಎಲ್ಲವನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ವಿಶ್ವಗುರು ಎನ್ನಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. 

ದೇಶದಲ್ಲಿ ರಾಷ್ಟ್ರೀಯ ಒಕ್ಕೂಟ ಉದ್ಯೋಗ ನೀತಿಯ ಅನಿವಾರ್ಯತೆ ಇದೆ. ಒಕ್ಕೂಟ ವ್ಯವಸ್ಥೆಯನ್ನು ಉದ್ಯೋಗ ನೀತಿಗೆ ಅಳವಡಿಸದಿದ್ದರೆ, ನೀಟ್ ಪರೀಕ್ಷೇಯಂತೆ ಕೇಂದ್ರಕೃತವಾಗುತ್ತದೆ. ಎಲ್ಲಾವನ್ನು ಕೇಂದ್ರಗೃತಗೊಳೀಸುವುದನ್ನು ಕೇವಲ ಎಡಪಂಥೀಯ ಪಕ್ಷಗಳು ಮಾತ್ರ ವಿರೋಧಿಸುತ್ತವೆ. ಕಾಂಗ್ರೇಸ್ ಪಕ್ಷವು ಅದನ್ನು ವಿರೋಧಿಸುವಲ್ಲಿ ವಿಫಲವಾಗಿದೆ ಎಂದು ಅವರು ತಿಳಿಸಿದರು. 


`ಮೂರು ದಶಕಗಳ ಹಿಂದೆ ಬಂಡವಾಳಶಾಹಿಗಳು ಒಗ್ಗೂಡಿದ ಪರಿಣಾಮವಾಗಿ ಇಂದು ದೇಶದ ಆರ್ಥಿಕತೆ ನೆಲಕಚ್ಚಿದೆ. ಸಾರ್ವಜನಿಕ ಉದ್ದಿಮೆಗಳನ್ನು ನಷ್ಟದಲ್ಲದೆ ಎಂದು ನೆಪವೊಡ್ಡಿ ಖಾಸಗೀಕರಣಗೊಳಿಸಲಾಗುತ್ತಿದೆ. ಇದರಿಂದ ಉದ್ಯೋಗದಲ್ಲಿ ಅಭದ್ರತೆ ಉಂಟಾಗುತ್ತದೆ. ಕಾರ್ಮಿಕರನ್ನು ಬದಿಗೊತ್ತಲು 44 ಕಾರ್ಮಿಕ ಕಾಯ್ದೆಗಳನ್ನು ಒಗ್ಗೂಡಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿಸಿದೆ'  

-ಕೆ.ಪ್ರಕಾಶ್, ಪ್ರಗತಿಪರ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News