ಕಳಸ; ಜೀಪ್ ಢಿಕ್ಕಿ: ಬಾಲಕಿ ಸ್ಥಳದಲ್ಲೇ ಮೃತ್ಯು

Update: 2022-02-01 05:11 GMT

ಕಳಸ, ಫೆ.1: ಪಟ್ಟಣ ಸಮೀಪದ ಕೋಟೆಹೊಳೆ ಎಂಬಲ್ಲಿ ಮದರಸ ತರಗತಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಜೀಪ್ ಹಿಂದಿನಿಂದ ಬಾಲಕಿಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.

ಮೃತ ಬಾಲಕಿಯನ್ನು ಪಟ್ಟಣದ ಕಳಶೇಶ್ವರ ನಗರದ ವಜೀರ್ ಅಹ್ಮದ್ ಎಂಬವರ ಪುತ್ರಿ ನಫಿಯಾ (10) ವರ್ಷ ಎಂದು ತಿಳಿದು ಬಂದಿದೆ.

ಮದರಸ ತರಗತಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮೂವರು ಬಾಲಕಿಯರ ಪೈಕಿ ಒಬ್ಬಾಕೆಗೆ ಜೀಪ್ ಢಿಕ್ಕಿ ಹೊಡೆದ ಪರಿಣಾಮ ನಫಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಜೀಪ್ ಕಳಸ ಪಟ್ಟಣದಿಂದ ಕಳಕೊಡು ಕಡೆಗೆ ಹೋಗುತ್ತಿತ್ತು. ಮಕ್ಕಳು ಮದರಸದಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿದ್ದರು. ಅಪಘಾತ ಎಸಗಿದ ಚಾಲಕನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಕಳಸ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News