ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಮರುತನಿಖೆ ಕೋರಿ ಕೋರ್ಟ್‍ಗೆ ಪ್ರತಿಭಟನಾ ಅರ್ಜಿ ಸಲ್ಲಿಕೆ

Update: 2022-02-14 16:10 GMT

ಬೆಂಗಳೂರು, ಫೆ.14: ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ನಗರದ 1ನೆ ಎಸಿಎಂಎಂ ಕೋರ್ಟ್‍ಗೆ ಸಂತ್ರಸ್ತೆ ಯುವತಿ ಪರ ವಕೀಲರು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದಾರೆ.  

ಪ್ರಕರಣದ ಮರು ತನಿಖೆ ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ 10 ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ರಮೇಶ್ ಜಾರಕಿಹೊಳಿಯನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ. ಪ್ರಕರಣದ ಕುರಿತು ಎಸ್‍ಐಟಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.  

ಆರೋಪಿ ರಮೇಶ್ ಬಂಧಿಸಲು ಅವಕಾಶವಿದ್ದರೂ ಬಂಧಿಸಿಲ್ಲ. ಸಂತ್ರಸ್ತೆ ಹೇಳಿಕೆಯನ್ನು ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ. ಪ್ರಕರಣದ ಮಹಜರು ಪ್ರಕ್ರಿಯೆಯನ್ನು ಸರಿಯಾಗಿ ಮಾಡಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಮಾಹಿತಿ ಕಲೆಹಾಕುವಲ್ಲಿ, ಸಂಗ್ರಹಿಸುವಲ್ಲಿ ಲೋಪ ಆಗಿದೆ. ಸೀಡಿಯ ವಿಡಿಯೋದಲ್ಲಿರುವವರ ಹೇಳಿಕೆಯನ್ನ ದಾಖಲಿಸಿಲ್ಲ. ಸಮರ್ಪಕ ವಿಚಾರಣೆ ನಡೆಸಿ ಸರಿಯಾಗಿ ಹೇಳಿಕೆ ದಾಖಲಿಸಿಲ್ಲ. ಸೌಮೇಂದು ಮುಖರ್ಜಿಯವರ ನಿಲುವು ಸಹ ಭಿನ್ನವಾಗಿತ್ತು. ಈ ಎಲ್ಲ ಅಂಶಗಳನ್ನ ಉಲ್ಲೇಖಿಸಿ ಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸಂತ್ರಸ್ತೆ ಪರ ವಕೀಲರಿಂದ ಕೋರ್ಟ್‍ಗೆ ಪ್ರತಿಭಟನಾ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News