ʼಸಾರ್ವಜನಿಕವಾಗಿ ಹಿಜಾಬ್‌ ಧರಿಸುವುದನ್ನುʼ ಸಹಿಸಲು ಸಾಧ್ಯವಿಲ್ಲ: ಪ್ರಜ್ಞಾ ಸಿಂಗ್‌ ಠಾಕೂರ್‌ ವಿವಾದಾತ್ಮಕ ಹೇಳಿಕೆ

Update: 2022-02-17 05:42 GMT

ಭೋಪಾಲ್: ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಲಾಗಿದೆ ಎಂಬುವುದರ ಕುರಿತು ಆಕ್ರೋಶ ಹೆಚ್ಚುತ್ತಿರುವ ನಡುವೆಯೇ, ಮಾಲೆಗಾಂವ್ ಸ್ಫೋಟ ಭಯೋತ್ಪಾದನಾ ಪ್ರಕರಣದ ಪ್ರಮುಖ ಆರೋಪಿ ಮತ್ತು ಜಾಮೀನಿನ ಮೇಲೆ ಹೊರಬಂದಿರುವ ವಿವಾದಾತ್ಮಕ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್, ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

ಈ ಹಿಂದೆ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದ ಹಾಗೂ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಭಯೋತ್ಪಾದನಾ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್‌ "ಮಹಿಳೆಯರು ಹಿಜಾಬ್‌ ಧರಿಸುವ ಅವಶ್ಯಕತೆ ಇಲ್ಲ" ಎಂದು ಹೇಳಿಕೆ ನೀಡಿದರು. ಅವರು ಅವರ ಮನೆಗಳಲ್ಲಿ ಸುರಕ್ಷಿತವಾಗಿಲ್ಲ. ಅಲ್ಲಿ ಮಾತ್ರ ಹಿಜಾಬ್‌ ಧರಿಸಿದರೆ ಸಾಕು. ಹಿಂದೂಗಳು ಮಹಿಳೆಯರನ್ನು ಪೂಜಿಸುವ ಕಾರಣ ಯಾರೂ ಹಿಜಾಬ್‌ ಧರಿಸಬೇಕಾದ ಅವಶ್ಯಕತೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

"ನೀವು ಎಲ್ಲೂ ಹಿಜಾಬ್‌ ಧರಿಸಬೇಕಾದ ಅವಶ್ಯಕತೆಯಿಲ್ಲ. ಅವರ ಮನೆಗಳಲ್ಲಿ ಸುರಕ್ಷಿತರಲ್ಲದವರು ಹಿಜಾಬ್‌ ಧರಿಸುತ್ತಾರೆ. ನಿಮಗೆ ಮದ್ರಸಾ ಇದೆ. ಅಲ್ಲಿ ನೀವು ಹಿಜಾಬ್‌ ಧರಿಸಿದರೆ ನಮಗೇನಿಲ್ಲ. ಹೊರಗಡೆ ಹಿಂದೂ ಸಮಾಜ ಇರುವಲ್ಲಿ ನೀವು ಹಿಜಾಬ್‌ ಧರಿಸಬೇಕಾದ ಅವಶ್ಯಕತೆ ಇಲ್ಲ ಎಂದು ಮಧ್ಯಪ್ರದೇಶದ ಭೊಪಾಲ್‌ ನ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಸದ್ಯ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News