ಹರ್ಯಾಣ: ಸ್ಥಳೀಯರಿಗೆ ಶೇ. 75 ಉದ್ಯೋಗ ಕೋಟಾಕ್ಕೆ ತಡೆ ಹೇರಿದ ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂಕೋರ್ಟ್

Update: 2022-02-17 06:36 GMT

ಚಂಡಿಗಡ: ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇಕಡಾ 75 ರಷ್ಟು ಮೀಸಲಾತಿ ನೀಡುವ ಹರ್ಯಾಣ ಸರಕಾರದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಪಂಜಾಬ್ ಹಾಗೂ  ಹರ್ಯಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.

ಈ ತಿಂಗಳ ಆರಂಭದಲ್ಲಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರಕಾರವು ಸ್ಥಳೀಯರಿಗೆ ಖಾಸಗಿ ವಲಯದ ಉದ್ಯೋಗಗಳ ಮೀಸಲಾತಿಯನ್ನು ನಿಲ್ಲಿಸುವ ಪಂಜಾಬ್ ಹಾಗೂ  ಹರ್ಯಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಕೇವಲ ತೊಂಬತ್ತು ಸೆಕೆಂಡುಗಳ ವಿಚಾರಣೆಯ ನಂತರ ಹೈಕೋರ್ಟ್ ತನ್ನ ನಿರ್ಧಾರವನ್ನು ಅಂಗೀಕರಿಸಿದೆ ಎಂದು ರಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ತನ್ನ ವಕೀಲರ ಮಾತನ್ನೂ ಕೇಳಿಲ್ಲ ಎಂದು ಅದು ವಾದಿಸಿದೆ.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ ನಾಲ್ಕು ವಾರಗಳಲ್ಲಿ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಹೈಕೋರ್ಟ್‌ಗೆ ಸೂಚಿಸಿದೆ.

ಈ ಸಮಯದಲ್ಲಿ ವಿವಾದಾತ್ಮಕ ಹೊಸ ಕಾನೂನನ್ನು ಅನುಸರಿಸದಿರಲು ನಿರ್ಧರಿಸುವ ಖಾಸಗಿ ವಲಯದ ಉದ್ಯೋಗದಾತರ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಹರ್ಯಾಣ ಸರಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News