"ಭಾರತ ನಿಮ್ಮ ಮನೆ": ಅಫ್ಘಾನ್ ಸಿಖ್-ಹಿಂದು ನಿಯೋಗಕ್ಕೆ ಪ್ರಧಾನಿ ಮೋದಿ ಭರವಸೆ

Update: 2022-02-19 17:31 GMT

ಹೊಸದಿಲ್ಲಿ,ಫೆ.19: ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿವಾರ ಅವರ ನಿವಾಸದಲ್ಲಿ ಭೇಟಿಯಾದ ಅಫ್ಘಾನ್ ಸಿಖ್-ಹಿಂದುಗಳ ನಿಯೋಗವೊಂದು ಸಿಎಎ ಕಾಯ್ದೆಯನ್ನು ತಂದಿರುವುದಕ್ಕಾಗಿ ಅವರನ್ನು ಪ್ರಶಂಸಿಸಿತು. ಕಾಯ್ದೆಯು ಅಫ್ಘಾನ್ ನಿರಾಶ್ರಿತರಿಗೆ ಆಶ್ರಯವನ್ನು ಒದಗಿಸಿದೆ ಎಂದೂ ನಿಯೋಗದ ಸದಸ್ಯರು ಹೇಳಿದರು.

ಭೇಟಿಯ ಸಂದರ್ಭ ಮೋದಿ,ಇದು (ಭಾರತ) ನಿಮ್ಮ ಮನೆಯಾಗಿದೆ. ನೀವು ನಮ್ಮ ಪಾಲಿಗೆ ಅತಿಥಿಗಳಲ್ಲ,ಪ್ರತಿ ಭಾರತೀಯನೂ ನಿಮ್ಮ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾನೆ ಎಂದು ನಿಯೋಗಕ್ಕೆ ತಿಳಿಸಿದರು.

ದೇಶದ ಹೊರಗೆ ವಾಸವಿರುವ ಹಿಂದುಗಳು ಮತ್ತು ಸಿಕ್ಖರು ಸೇರಿದಂತೆ ಭಾರತೀಯರ ನೋವುಗಳನ್ನು ನೀವು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಿರಿ. ಸಮಸ್ಯೆ ಎದುರಾದಾಗಲೆಲ್ಲ ನೀವು ನೆರವಿಗೆ ಮುಂದೆ ಬಂದಿದ್ದೀರಿ ಎಂದು ನಿಯೋಗದ ಸದಸ್ಯರೋರ್ವರು ಮೋದಿಯವರನ್ನು ಪ್ರಶಂಸಿಸುತ್ತ ಹೇಳಿದರು.

ನೆರೆಯ ದಕ್ಷಿಣ ಏಷ್ಯಾ ದೇಶಗಳಲ್ಲಿಯ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಒದಗಿಸಲು ಕೈಗೊಂಡಿರುವ ಕ್ರಮಗಳನ್ನು ನಿಯೋಗದ ಸದಸ್ಯರು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News