ತೃತೀಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.5.4ರಷ್ಟು ಬೆಳವಣಿಗೆ

Update: 2022-02-28 18:46 GMT

ಹೊಸದಿಲ್ಲಿ,ಫೆ.28: ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ಶೇ.5.4ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2021-22ರ ಪೂರ್ಣ ವಿತ್ತವರ್ಷದಲ್ಲಿ ಶೇ.8.9ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಜಿಡಿಪಿಯ ಎರಡನೇ ಸುಧಾರಿತ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಸೋಮವಾರ ಬಿಡುಗಡೆಗೊಳಿಸಿದೆ.

ಹಿಂದಿನ ಎರಡು ತ್ರೈಮಾಸಿಕಗಳಲ್ಲಿಯ ತನ್ನ ಜಿಡಿಪಿ ಅಂದಾಜುಗಳನ್ನೂ ಸರಕಾರವು ಸ್ವಲ್ಪಮಟ್ಟಿಗೆ ಪರಿಷ್ಕರಿಸಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜುಲೈ-ಸೆಪ್ಟಂಬರ್ ತ್ರೈಮಾಸಿಕಕ್ಕೆ ಜಿಡಿಪಿಯು ಶೇ.8.4ರ ಹಿಂದಿನ ಅಂದಾಜಿನ ಬದಲು ಶೇ.8.5ರಷ್ಟು ಮತ್ತು ಎಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹಿಂದೆ ವರದಿಯಾಗಿದ್ದ ಶೇ.20.1ರ ಬದಲು ಶೇ.20.3ರಷ್ಟು ತೀವ್ರವಾಗಿ ಬೆಳವಣಿಗೆಯಾಗಿದೆ.
ತೃತೀಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.6ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದ್ದು,2021-22ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಹಿಂದೆ ಅಂದಾಜಿಸಿದ್ದ ಶೇ.9.2ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ಸರಕಾರವು ಕಳೆದ ತಿಂಗಳು ಬಿಡುಗಡೆಗೊಳಿಸಿದ್ದ ತನ್ನ ಮೊದಲ ಸುಧಾರಿತ ಅಂದಾಜಿನಲ್ಲಿ 2021-22ನೇ ಸಾಲಿಗೆ ಶೇ.9.2ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಿತ್ತು. ಆದಾಗ್ಯೂ ಇದು ಕೋವಿಡ್ನ ಹೊಸ ರೂಪಾಂತರಿಗಳಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಆರ್ಥಿಕ ಚಟುವಟಿಕೆ ನಷ್ಟವನ್ನು ಪ್ರತಿಬಿಂಬಿಸಿರಲಿಲ್ಲ.
ಹಿಂದಿನ ಹಣಕಾಸು ವರ್ಷ (2020-21)ರಲ್ಲಿ ಭಾರತೀಯ ಆರ್ಥಿಕತೆಯು ಶೇ.(-)6.6ರಷ್ಟು ಸಂಕುಚಿತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News