ಏರ್‌ಇಂಡಿಯಾದ ನೂತನ ಸಿಇಒ ಹುದ್ದೆಯನ್ನು ತಿರಸ್ಕರಿಸಿದ ಟರ್ಕಿಯ ಇಲ್ಕರ್‌ ಐಜಿ: ವರದಿ

Update: 2022-03-01 08:29 GMT
Photo: wikimedia commons

ಹೊಸದಿಲ್ಲಿ: ಟರ್ಕಿಶ್‌ ವಿಮಾನ ಯಾನ ಸಂಸ್ಥೆಯ ಮಾಜಿ ಅಧ್ಯಕ್ಷ ಇಲ್ಕರ್‌ ಐಜಿ ಅವರು ಏರ್ ಇಂಡಿಯಾದ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗುವ ಟಾಟಾ ಸನ್ಸ್‌ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ರಾಯಿಟರ್ಸ್ ಮಂಗಳವಾರ ವರದಿ ಮಾಡಿದೆ.

ಟರ್ಕಿಯ ವಿಮಾನಯಾನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಹಾಗೂ ಟರ್ಕಿ ಪ್ರಧಾನಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಲ್ಕರ್‌ ರನ್ನು ಏರ್‌ ಇಂಡಿಯಾ ಸಿಇಒ ಆಗಿ ನೇಮಕ ಮಾಡುವ ಕುರಿತು ಹಲವು ವಿರೋಧಗಳು ಕೇಳಿ ಬಂದಿದ್ದವು. ಬಲಪಂಥೀಯರು ಈ ಕುರಿತು ಹಲವು ರೀತಿಯ ಅಪಪ್ರಚಾರಗಳನ್ನೂ ನಡೆಸಿದ್ದರು. 

"ಇಂತಹ ನಿರೂಪಣೆಗಳು ಕಂಡುಬರುತ್ತಿರುವ ಕಾರಣ, ಅದರ ನೆರಳಿನಲ್ಲಿ ಈ ಸ್ಥಾನವನ್ನು ಒಪ್ಪಿಕೊಳ್ಳುವುದು ಕಾರ್ಯಸಾಧ್ಯವಲ್ಲ ಮತ್ತು ಇದೊಂದು ಗೌರವಾನ್ವಿತ ನಿರ್ಧಾರವೂ ಆಗುವುದಿಲ್ಲ ಎಂಬ ತೀರ್ಮಾನವನ್ನು ನಾನು ಕೈಗೊಂಡಿದ್ದೇನೆ" ಎಂದು ಇಲ್ಕರ್‌ ಹೇಳಿಕೆ ನೀಡಿರುವಾಗಿ bloomberg ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News