ಪೈಲಟ್ ಗಳ ಕೊರತೆಯಿಂದ ಸಣ್ಣ ವಿಮಾನಗಳ ಹಾರಾಟ: ಉಕ್ರೇನ್ ನಿಂದ ಹೆಚ್ಚು ಭಾರತೀಯರ ಸ್ಥಳಾಂತರಕ್ಕೆ ಅಡ್ಡಿ

Update: 2022-03-01 17:07 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಮಾ. 1: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವುಗೊಳಿಸಲು ವಿಮಾನಗಳ ಕಾರ್ಯಾಚರಣೆ ನಡೆಸುತ್ತಿರುವ ಏರ್ ಇಂಡಿಯಾ ಬಿ 747ರಂತಹ ದೊಡ್ಡ ವಿಮಾನವನ್ನು ಹಾರಿಸಲು ಪೈಲಟ್ ಗಳ ಕೊರತೆಯಿಂದ ಸಣ್ಣ ವಿಮಾನ (ಬೋಯಿಂಗ್ 787 ಡ್ರೀಮ್ ಲೈನರ್)ವನ್ನು ಬಳಸುತ್ತಿದೆ. 5 ಐದು ದಿನಗಳ ಹಿಂದೆ ಆರಂಭವಾದ ಮೊದಲ 6 ವಿಮಾನಗಳ ಕಾರ್ಯಾಚರಣೆಯಲ್ಲಿ ಉಕ್ರೇನ್ ನಿಂದ ಭಾರತಕ್ಕೆ ಸುಮಾರು 1,400 ಭಾರತೀಯರನ್ನು ಸ್ಥಳಾಂತರಿಸಲಾಗಿದೆ. 

ಏರ್ ಇಂಡಿಯ ಬಿ 747ರಂತಹ ಅತ್ಯಧಿಕ ಸಾಮರ್ಥ್ಯದ ವಿಮಾನವನ್ನು ಕಳುಹಿಸಿದ್ದರೆ ಇನ್ನಷ್ಟು ಜನರನ್ನು ಸ್ಥಳಾಂತರಗೊಳಿಸಬಹುದಿತ್ತು. ಬಿ 787 ಡ್ರೀಮ್ಲೈನರ್ 330 ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದರೆ, ಬಿ 747 600 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಈ ವಿಮಾನಗಳನ್ನು ಹಾರಿಸುವ ಪೈಲಟ್ ಗಳ ಕೊರತೆ ಕಾರಣದಿಂದ ಈ ಸಮಸ್ಯೆ ಸಂಭವಿಸಿದೆ. ಬಿ744 (ಬಿ 747-400) ಹಾರಿಸುವರನ್ನು ಬಿ777, ಬಿ787 ಹಾಗೂ ಎ320 ವಿಮಾನಗಳನ್ನು ಹಾರಿಸಲು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಮೂಲಗಳ ಪ್ರಕಾರ ಏರ್ ಇಂಡಿಯಾದಲ್ಲಿರುವ ನಾಲ್ಕು ಬಿ 747 ವಿಮಾನಗಳನ್ನು ಪ್ರಸ್ತುತ ಕಾರ್ಗೋ ಹಾಗೂ ಹಜ್ ಆಪರೇಷನ್ (ತಲಾ 2)ಗೆ ಬಳಸಲು ಪರಿಗಣಿಸಲಾಗಿದೆ. ಪೈಲಟ್ಗಳ ಕೊರತೆಯ ಕುರಿತು ಪ್ರತಿಕ್ರಿಯಿಸಲು ಏರ್ ಇಂಡಿಯಾ ನಿರಾಕರಿಸಿದೆ. ‘‘ವಿಮಾನಗಳ ನಿಯೋಜನೆ ವಿಮಾನಗಳ ಲಭ್ಯತೆ, ಗಮ್ಯ ಸ್ಥಾನದ ವಿಮಾನ ನಿಲ್ದಾಣಗಳಲ್ಲಿನ ಮೂಲಭೂತ ಸೌಕರ್ಯಗಳ ನಿರ್ವಹಣೆ, ತೈಲ ಸಾಮರ್ಥ್ಯ ಮೊದಲಾದ ಹಲವು ಅಂಶಗಳನ್ನು ಅವಲಂಬಿಸಿದೆ. ಕಾರ್ಯಾಚರಣೆಯ ಕಾರಣಗಳು ಹಾಗೂ ಮೂಲ ಸೌಕರ್ಯದ ಕಾರ್ಯಸಾಧ್ಯತೆ ಅನುಸರಿಸಿ ಬಿ 787 ವಿಮಾನಗಳನ್ನು ಬಳಸಲಾಗುತ್ತಿದೆ’’ ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News