ಒಡಿಶಾ: ಮಧ್ಯಮ ಶ್ರೇಣಿಯ ಕ್ಷಿಪಣಿ ಪರೀಕ್ಷೆ ಯಶಸ್ವಿ

Update: 2022-03-30 18:56 GMT

ಬಾಲಸೋರೆ, ಮಾ. 30: ಭೂಮಿಯಿಂದ ಆಕಾಶಕ್ಕೆ ನೆಗೆಯುವ ಮಧ್ಯಮ ಶ್ರೇಣಿಯ ಕ್ಷಿಪಣಿಯನ್ನು ಭಾರತ ಬುಧವಾರ ಒಡಿಶಾ ಕರಾವಳಿಯಲ್ಲಿ ಮತ್ತೆ ಎರಡು ಬಾರಿ ಯಶಸ್ವಿ ಪರೀಕ್ಷೆ ನಡೆಸಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.

ಭೂಮಿಯಿಂದ ಆಕಾಶಕ್ಕೆ ನೆಗೆಯುವ ಮಧ್ಯಮ ಶ್ರೇಣಿಯ ಕ್ಷಿಪಣಿಯನ್ನು ಇಲ್ಲಿನ ಚಾಂಡಿಪುರ ಸಮೀಪದ ಸಮಗ್ರ ಪರೀಕ್ಷಾ ವಲಯದ ಉಡಾವಣಾ ವೇದಿಕೆ-3ರಿಂದ ಅಪರಾಹ್ನಕ್ಕಿಂತ ಮುನ್ನ ಯಶಸ್ವಿ ಪರೀಕ್ಷೆ ನಡೆಸಲಾಯಿತು ಎಂದು ಅದು ಹೇಳಿದೆ. ಎರಡೂ ಪರೀಕ್ಷೆ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ರವಿವಾರ ಕೂಡ ಸೇನಾ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ನೆಗೆಯುವ ಮಧ್ಯಮ ಶ್ರೇಣಿಯ ಕ್ಷಿಪಣಿಯನ್ನು ಸಮಗ್ರ ಪರೀಕ್ಷಾ ವಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿ ಪರೀಕ್ಷೆ ಹಿನ್ನೆಲೆಯಲ್ಲಿ ಬಾಲಸೋರೆಯ ಜಿಲ್ಲಾಡಳಿತ ಇಲ್ಲಿಗೆ ಸಮೀಪ ವಾಸಿಸುತ್ತಿರುವ ಜನರನ್ನು ವರ್ಗಾಯಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News