ರಾಜ್ಯದಲ್ಲಿ ಎರಡು ವರ್ಷಗಳಲ್ಲೇ ಕನಿಷ್ಠ ಕೋವಿಡ್ ಪ್ರಕರಣ ದಾಖಲು

Update: 2022-03-31 02:16 GMT

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ 35 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಇದು ಸುಮಾರು ಎರಡು ವರ್ಷಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇದಕ್ಕೂ ಕಡಿಮೆ ಅಂದರೆ ಕೇವಲ 24 ಹೊಸ ಕೋವಿಡ್-19 ಪ್ರಕರಣಗಳು ಕಳೆದ ವರ್ಷದ ಮೇ 14ರಂದು ದಾಖಲಾಗಿದ್ದವು.

ಬುಧವಾರ ರಾಜ್ಯದಲ್ಲಿ ದಾಖಲಾದ 35 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 25 ಪ್ರಕರಣಗಳು ವರದಿಯಾಗಿವೆ. ಬುಧವಾರ ರಾಜ್ಯದ 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಎಂಟು ಜಿಲ್ಲೆಗಳು ಸಂಪೂರ್ಣ ಕೋವಿಡ್ ಮುಕ್ತ ಜಿಲ್ಲೆಗಳಾಗಿದ್ದು, ಇಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲ.

ರಾಜ್ಯದಲ್ಲಿ ಬುಧವಾರ ಕೋವಿಡ್-19 ಸೋಂಕಿತರ ಪೈಕಿ ಒಬ್ಬ ಮೃತಪಟ್ಟಿರುವುದು ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ವ್ಯಕ್ತಿ ಫೆಬ್ರುವರಿ 13ರಂದು ಮೃತಪಟ್ಟಿದ್ದು, ಅತನ ಸಾವನ್ನು ಬುಧವಾರ ರಾಜ್ಯದ ಕೋವಿಡ್ ಸೋಂಕಿತರ ಸಾವಿನ ಪಟ್ಟಿಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News