‘ಎಲ್ಲರೂ ಒಂದಾಗಿ ಮಾನವೀಯತೆಯಿಂದ ಬದುಕಬೇಕು’: ಬೇಲೂರಿನಲ್ಲಿ ‘ಮಾನವೀಯತೆಯ ಕಡೆ ಸೌಹಾರ್ದ ನಡೆ’ ಜಾಥಾ

Update: 2022-04-11 18:56 GMT

ಬೇಲೂರು, ಎ.11: ಎಲ್ಲರೂ ಒಂದಾಗಿ ಮಾನವೀಯತೆಯಿಂದ ಬದುಕಬೇಕಾಗಿದೆ. ಸಂವಿಧಾನಕ್ಕೆ ಗೌರವ ಕೊಟ್ಟು , ಯಾರ ಮನಸ್ಸಿಗೂ ನೋವಾಗದಂತೆ, ದಕ್ಕೆಯಾಗದ ರೀತಿಯಲ್ಲಿ ಜೀವನ ಸಾಗಿಸಬೇಕು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

 ಬೇಲೂರಿನಲ್ಲಿ ಪ್ರಗತಿಪರ ಸಂಘಟನೆಗಳ ಪ್ರಮುಖರು, ಸರ್ವ ಧರ್ಮಗಳ ಮುಖಂಡರು, ಸಾರ್ವಜನಿಕರು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸೋಮವಾರ ಮಾನವೀಯತೆಯ ಕಡೆ ಸೌಹಾರ್ದ ನಡೆ ಜಾಥಾಕ್ಕೆ ಚಾಲನೆ ನೀಡಿ ಸ್ವಾಮೀಜಿಯವರು ಮಾತನಾಡಿದರು.

 ಜಾಥಾದಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಧರ್ಮಗುರುಗಳು ಹೆಜ್ಜೆ ಹಾಕಿದರು.ನೆಹರೂ ಸರ್ಕಲ್‌ನಿಂದ ಪ್ರಾರಂಭವಾದ ಈ ನಡೆಗೆ ಸೌಹಾರ್ದಮಯ ಬಿತ್ತಿಪತ್ರ ಪ್ರದರ್ಶನ ಮಾಡುತ್ತಾ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಎದುರು ಸಮಾಪ್ತವಾಯಿತು.

ಕಾರ್ಯಕ್ರಮದ ಆಯೋಜಕರಲ್ಲಿ ಪ್ರಮುಖರಾದ ಧರ್ಮೇಶ್ ಮಾತನಾಡಿ, ಶತಮಾನಗಳಿಂದ ಬೇಲೂರು ಜಾತ್ರೆಗೆ ಸರ್ವ ಜನಾಂಗದವರು ಪಾಲ್ಗೊಳ್ಳುತ್ತಿದ್ದಾರೆ. ಈ ಪರಂಪರೆ ಮುಂದುವರಿಯಬೇಕು ಇದಕ್ಕೆ ಧಕ್ಕೆಯಾಗಬಾರದು. ತಾಲೂಕು ಆಡಳಿತ ಸಂವಿಧಾನವನ್ನು ಎತ್ತಿಹಿಡಿದು ಸಮಾಜಘಾತಕ ಶಕ್ತಿಗಳ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು. ಶಾಂತಿ ಭಂಗ ಮಾಡಲು ಮುಂದಾಗುವ ಹಾಗೂ ಒಂದು ಸಮುದಾಯದವರು ವ್ಯಾಪಾರ ಮಾಡಬಾರದು ಎಂದು ಒತ್ತಾಯಿಸುವ ವ್ಯಕ್ತಿಗಳ ಮೇಲೆ ದೂರು ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಬೇಲೂರಿನ ಶಾಂತಿಯನ್ನು ಜೊತೆಗೆ ಸಂವಿಧಾನವನ್ನು ಸೋಲಲು ಬಿಡಬಾರದು ಇದಕ್ಕಾಗಿ ನಾವು ಎಲ್ಲರೂ ಒಂದಾಗಿ ಶಾಂತಿ ಮಾರ್ಗದ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಜೊತೆಗೆ ಶಾಸಕರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಪುರಸಭೆಯ ಮುಖ್ಯಾಧಿಕಾರಿ, ಪೊಲೀಸರು ಇದರ ಕಡೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಜಾಥಾದಲ್ಲಿ ಶಾಸಕ ಲಿಂಗೇಶ್, ಕಾಂಗ್ರೆಸ್ ಮುಖಂಡ ಕೃಷ್ಣೇಗೌಡ. ಗಂಡಸಿ ಶಿವರಾಮ, ಎಚ್.ಕೆ.ಮಹೇಶ್, ವೈ.ಟಿ.ದಾಮೋದರ್, ಧರ್ಮ ಗುರು ಇಬ್ರಾಹೀಂ ಕೆ.ಮುಸ್ಲಿಯಾರ್, ಜಾಮಿಯಾ ಮಸೀದಿ ಧರ್ಮ ಗುರು ಸಾಹಿದ್ ಸಾಬ್, ಬಿಶಪ್ ಡಾ.ಸಿ.ಎಸ್.ಜೋಸೆಫ್, ದಸಂಸ ಹಿರಿಯ ಮುಖಂಡ ಸಂದೇಶ್, ಪೃಥ್ವಿ, ಮಲ್ನಾಡ್ ಮೆಹಬೂಬ್, ಮಾದಿಗ ದಂಡೋರ ಮಂಜುನಾಥ, ಅರೆಹಳ್ಳಿ ನಿಂಗರಾಜ್, ಆರ್ ಪಿ ಐ ಸತೀಶ್, ಮುಬಶೀರ್, ಸಮೀರ್, ಜಿಪಂ ಮಾಜಿ ಅಧ್ಯಕ್ಷ ಸೈಯದ್ ತೌಫೀಕ್ ಜಮಾಲ್ ಉದ್ದೀನ್, ಹರೀಶ್, ತಮ್ಮಣ್ಣ ರಾಯಪುರ, ಬೇಲೂರು ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಧರ್ಮೇಗೌಡ , ಹಾಸನ ಜಿಲ್ಲಾ ರೈತಸಂಘದ ಅಧ್ಯಕ್ಷ ಸ್ವಾಮಿಗೌಡ, ವೀರಶೈವ ಮುಖಂಡ ರಾಜಣ್ಣ , ತಾಲೂಕು ರೈತ ಸಂಘದ ಅಧ್ಯಕ್ಷ ಬೋಗ ಮಲ್ಲೇಶ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್, ವೀರಶೈವ ಮುಖಂಡರಾದ ರಾಜು, ರಾಯಪುರ ಶಿವಣ್ಣ, ಹಾಸನ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಅಬ್ದುಲ್ ಸಮದ್, ಕೆಪಿಸಿಸಿ ಸಂಯೋಜಕ ನವೀದ್, ಜೆಡಿಎಸ್ ಯುವ ಮುಖಂಡ ಮಹೇಶ್, ಕಾಫಿ ಬೆಳೆಗಾರರಾದ ನಾಗೇನಹಳ್ಳಿ ಮುಜೀಬ್ , ಅಂಬುಗಾ ಮಲ್ಲೇಶ್, ತಾಪಂ ಮಾಜಿ ಸದಸ್ಯ ಚಿಕ್ಕ ಬ್ಯಾಡಗೆರೆ ಮಂಜುನಾಥ್ ಜಯಕರ್ನಾಟಕ ತಾಲೂಕು ಸಂಘಟನೆ ಅಧ್ಯಕ್ಷ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಎಸ್ಸಿ,ಎಸ್ಟಿ ತಾಲೂಕು ಅಧ್ಯಕ್ಷ ಶಂಭೋಗನಹಳ್ಳಿ ಬಾಬು, ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಝಾಕಿರ್ ಪಾಷಾ, ಸಾಮಾಜಿಕ ಹೋರಾಟಗಾರ ನೂರ್ ಅಹ್ಮದ್ , ಫಾರೂಕ್ ಕೊಪ್ಪಲು ಸೇರಿದಂತೆ ಸಮಾನ ಮನಸ್ಕರು ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News