ಅನುದಾನಿತ ಶಾಲಾ ಶಿಕ್ಷಕರನ್ನು ನೇಮಿಸುವಂತೆ ಸರಕಾರ ನಿರ್ದೇಶನ

Update: 2022-04-22 13:03 GMT

ಬೆಂಗಳೂರು, ಎ.22: ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸರಕಾರವು ತಿಳಿಸಿದೆ. 

ಧಾರವಾಡ ಜಿಲ್ಲಾ ವ್ಯಪ್ತಿಯ ಅನುದಾನಿತ ಪ್ರೌಢಶಾಲೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಸೇರಿದಂತೆ ಇತರ ಕಾರಣಗಳಿಂದ 2015ರ ಡಿಸೆಂಬರ್ ಅಂತ್ಯಕ್ಕೆ 318 ಬೋಧಕ ಹುದ್ದೆಗಳ ಖಾಲಿಯಾಗಿದ್ದು, ಈ ಹಿಂದೆ 114 ಹುದ್ದೆಗಳಿಗೆ ಅನುಮೋದನೆ ನೀಡಲಾಗಿತ್ತು. ಈಗ ಉಳಿದ 204 ಹುದ್ದೆಗಳನ್ನು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ನಿಯಮಾನುಸಾರ ಆಯ್ಕೆ ಪ್ರಕ್ರಿಯೆಯ ಹಂತಗಳನ್ನು ಪೂರ್ಣಗಳಿಸಿ 2022-23ರ ಶೈಕ್ಷಣಿಕ ವರ್ಷದ ಆರಂಭದ ನಂತರ ಆದೇಶ ನೀಡುವಂತೆ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ಶ್ರೀನಿವಾಸಮೂರ್ತಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News