ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಅದಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ: ಸಿದ್ದರಾಮಯ್ಯ

Update: 2022-04-23 15:18 GMT

ದಾವಣಗೆರೆ :ನಮ್ಮ ನಾಡು ದೇಶ ಸರ್ವಜನಾಂಗದ ಶಾಂತಿಯ ತೋಟ.  ಸಂವಿಧಾನದಲ್ಲಿ ಸಹಿಷ್ಣುತೆ ಹಾಗೂ ಸಹಬಾಳ್ವೆ ಇಟ್ಟುಕೊಂಡು ಬಾಳಬೇಕಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶನಿವಾರ ಹರಿಹರದ ಹರಕ್ಷೇತ್ರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು.  ಜಾತಿ ವ್ಯವಸ್ಥೆ ನಿರ್ನಾಮ ಆಗಬೇಕು  ಎಂದ ಬಸವಣ್ಣವರು ಕಂಡ ಕನಸು ನಮಗೆ ದಾರಿದೀಪ ಆಗಬೇಕು. ಧರ್ಮ ಎನ್ನುವುದು ಮನುಷ್ಯರಿಗೋಸ್ಕರ  ಇರುವುದು. ಧರ್ಮಕ್ಕಾಗಿ  ಮನುಷ್ಯರಲ್ಲ. ಇದು ಮಾನವ ಧರ್ಮದ ಮೇಲೆ  ಸಮಾಜ ನಡೆಯಬೇಕು ಎಂದರು.  

ದೇಶದಲ್ಲಿ ನೋಟು ಅಮಾನ್ಯ ಮಾಡಿದ ಮೇಲೆ ಮತ್ತು ಕೋವಿಡ್ ಸೋಂಕು ಕಾರಣಕ್ಕೆ ಸಣ್ಣ ಕೈಗಾರಿಕೆಯಲ್ಲಿ 11 ಕೋಟಿ ಜನರಲ್ಲಿ ಬಹುತೇಕರು ನಿರುದ್ಯೋಗಗಳಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೇ ಆರ್ಥಿಕ ಚಟುವಟಿಗಳು ನಡೆಯುತ್ತವೆ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದರು. 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ವಾಗಿದೆ. ಅಮೃತ ಮಹೋತ್ಸದ ಹಿನ್ನೆಲೆ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕು. ದೇಶಕ್ಕಾಗಿ ನಾವು. ಈ ಸಂವಿಧಾನ ಉಳುವಿಗೆ ಹಾಗೂ  ಪ್ರಜಾಪ್ರಭುತ್ವ ಉಳಿಸಲು ಪ್ರತಿಯೊಬ್ಬರು  ಹೋರಾಟ ಮಾಡಬೇಕು. ಚೆನ್ನಮ್ಮ ಜಯಂತಿ ಸರ್ಕಾರಿ  ಕಾರ್ಯಕ್ರಮ ಮಾಡಿದ್ದು ನಾನು. ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟಿದ್ದು ನಮ್ಮ ಸರ್ಕಾರ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಅದಕ್ಕೆ ಕಾರಣ. ಸ್ವತಂತ್ರರಾಗಿ ಸ್ವಾಭಿಮಾನದಿಂದ ಜೀವನ ಸಾಗಿಸಬೇಕು. ಪ್ರತಿಯೊಬ್ಬರಿಗೆ ಸಮಾನ ಅವಕಾಶ ಸಿಗಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ಪ್ರಜಾಪ್ರಭುತ್ವ ನೆಲೆಗೊಳ್ಳಬೇಕು ಎಂಬುದು ಈ ಎಲ್ಲ ಮಹನಿಯರು ಆಶಯವಾಗಿತ್ತು ಎಂದರು.

12ನೇ ಶತಮಾನದಲ್ಲಿ ಬಸವಾಧಿ ಶರಣರು ಶ್ರೇಣಿಕೃತ ವ್ಯವಸ್ಥೆ ನಿರ್ನಾಮವಾಗಬೇಕು. ಜಾತಿ ರಹಿತ, ಶ್ರೇಣಿರಹಿತ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ಇದು ನಮಗೆ ದಾರಿದೀಪವಾಗಬೇಕು.  ಅಂಬೇಡ್ಕರ್ ಅವರು ದೇಶದಲ್ಲಿ ಹುಟ್ಟದೇ ಇದ್ದರೆ ಅಸ್ಪೃಶ್ಯತೆ ನಾಶವಾಗುತ್ತಿರಲಿಲ್ಲ. ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಬಸವಣ್ಣ ಕಟ್ಟಿದ ಕನಸಿನ ಸಮಾಜದ ನಿರ್ಮಾಣಕ್ಕೆ ಸರಿಯಾದ ಸಂವಿಧಾನ ರಚನೆಯಾಗಿದೆ. ವಿಶಾಲವಾದ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಬೆಳವಾಡಿ ಮಲ್ಲಮ್ಮ 3000 ಹೆಣ್ಣುಮಕ್ಕಳಿಗೆ ಶಸ್ತ್ರಭ್ಯಾಸ ನೀಡಿದ್ದರು. ಅದು ತಮಾಷೆಯಲ್ಲ. ಶೌರ್ಯ, ಸಮರಕಲೆ ನೋಡಿ ಶಿವಾಜಿಯವರೇ ಹಿಂದೆ ಸರಿದಿದ್ದರು. ಕೆಳದಿ ಚೆನ್ನಮ್ಮ 17ನೇ ಶತಮಾನದಲ್ಲಿ 1924ರಲ್ಲಿ ಥ್ಯಾಕರೆಯನ್ನು ಕೊಂದು ಬಿಸಾಡಿದವರು ಕಿತ್ತೂರು ರಾಣಿ ಚೆನ್ನಮ್ಮ. ಅವರ ಜತೆಗೆ ಸಂಗೊಳ್ಳಿ ರಾಯಣ್ಣನನ್ನು ಮರೆಯುವಂತಿಲ್ಲ. ಚೆನ್ನಮ್ಮ ಜೈಲು ಸೇರಿದಾಗ ಗೆರಿಲ್ಲಯುದ್ಧ ಮಾಡಿದ್ದರು. ಅವರನ್ನು ನೇಣುಗಂಬಕ್ಕೆ ಏರಿದ್ದರು. 1930ರಲ್ಲಿ ದಂಡಿಯಾತ್ರೆ ನಡೆದಾಗ ಅದರಲ್ಲ ಭಾಗವಹಿಸಿದ್ದರು ಏಕೈಕ ಹೋರಾಟಗಾರ ಮೈಲಾರ ಮಹದೇವ ಅವರು ಗುಂಡಿಗೆ ಬಲಿಯಾಗಿದ್ದರು, ಕಂಬಳಿ ಸಿದ್ದಪ್ಪ ಶಿಕ್ಷಣ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News