30ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವ

Update: 2022-04-28 11:42 GMT

ಬೆಂಗಳೂರು, ಎ.28: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವ ನಾಳೆ(ಎ.30) ನಡೆಯಲಿದ್ದು, ಮಂಗಳೂರಿನ ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಕಾಲೇಜಿನ ಅಲೈಡ್ ಕೋರ್ಸಿನ ಶಮೀಯತ್ ನುಸೈಬಾ ಸೇರಿದಂತೆ 83 ವೈದ್ಯಕೀಯ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಬುಧವಾರ ನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿವಿಯ ಕುಲಪತಿ ಡಾ.ಎಂ.ಕೆ.ರಮೇಶ್, ಎ.30ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 24ನೆ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ, ಡಾ.ಬಿ.ಎನ್.ಗಂಗಧರ್ ಹಾಗೂ  ಡಾ.ರಾಜನ್ ದೇಶಪಾಂಡೆ ಅವರಿಗೆ ‘ಡಾಕ್ಟರೇಟ್ ಆಫ್ ಸೈನ್ಸ್' ಪ್ರದಾನ ಮಾಡಲಾಗುತ್ತಿದೆ ಎಂದರು.

ಈ ಬಾರಿ ಒಟ್ಟು 83 ವೈದ್ಯಕೀಯ ವಿದ್ಯಾರ್ಥಿಗಳು 100 ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ. ಪ್ರಸ್ತುತ ಶೈಕ್ಷಣಿಕ ವಾರ್ಷಿಕ ಸಾಲಿನಲ್ಲಿ 43,883 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದರು.

ಒಟ್ಟು 82 ಪಿಎಚ್‍ಡಿ, 146 ಸೂಪರ್ ಸ್ಪೆಸಾಲಿಟಿ, 6,796 ಸ್ನಾತಕೋತ್ತರ ಪದವಿ,78 ಸ್ನಾತಕೋತ್ತರ ಡಿಪ್ಲೋಮಾ ಪದವಿ, 365 ಫೆಲೋಶಿಪ್ ಕೋರ್ಸ್, 10 ಸರ್ಟಿಫಿಕೇಟ್ ಕೋರ್ಸ್ ಹಾಗೂ 36,409 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.ಇನ್ನೂ ಒಟ್ಟಾರೆ,ಶೇ. 82.25% ರಷ್ಟು ಫಲಿತಾಂಶ ವಿವಿಗೆ ಬಂದಿದೆ ಎಂದು ತಿಳಿಸಿದರು.

ಕೇಂದ್ರದ ಆರೋಗ್ಯ ಸಚಿವಾಲಯದ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವ ಚಿನ್ನದ ಪದಕವು 22 ಕ್ಯಾರೆಟ್ ಬಂಗಾರವುಳ್ಳ ಐದು ಗ್ರಾಂ ತೂಕದ ಪದಕವಾಗಿರುತ್ತದೆ. ಅದೇ ರೀತಿ, ಪ್ರಥಮ ದರ್ಜೆಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ಚಿನ್ನದ ಪದಕಗಳಿಗೆ ವಿವಿಯ ಸಂಪನ್ಮೂಲದಿಂದ ಹಾಗೂ ದಾನಿಗಳು ದೇಣಿಗೆಯಾಗಿ ನೀಡಿರುವ ಹಣದ ನಿಧಿಯಿಂದ ವೆಚ್ಚವನ್ನು ಭರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಯ ರಿಜಿಸ್ಟ್ರಾರ್ ರಾಮಕೃಷ್ಣ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

ಚಿನ್ನ ಪಡೆದ ವೈದ್ಯರು..!

►ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಿಸಿ ಕಾಲೇಜಿನ ಫಾರ್ಮಿಸಿ ಕೋರ್ಸ್ ವಿದ್ಯಾರ್ಥಿನಿ ಎನ್.ಶ್ವೇತಾ-4 ಚಿನ್ನದ ಪದಕ

►ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜಿನ ಬಿಫಾರ್ಮಾ ವಿದ್ಯಾರ್ಥಿ ಅಭಿಷೇಕ್ ಪಾಂಡೆ-4 ಚಿನ್ನದ ಪದಕ

►ಮಂಗಳೂರಿನ ಎಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಕಾಲೇಜಿನ ಅಲೈಡ್ ಕೋರ್ಸಿನ ವಿದ್ಯಾರ್ಥಿನಿ ಶಮೀಯತ್ ನುಸೈಬಾ-3 ಚಿನ್ನದ ಪದಕ

►ಚಿತ್ರದುರ್ಗ ಎಸ್‍ಜೆಎಂ ಡೆಂಟಲ್ ಕಾಲೇಜು ಅಂಡ್ ಹಾಸ್ಟಿಟಲ್ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿ-ಡಾ.ಸುಮನ್ ಬಿ.ಗೋದಿ-3 ಚಿನ್ನದ ಪದಕ

►ಬೆಂಗಳೂರು ಶ್ರೀ ಶ್ರೀ ಕಾಲೇಜು ಆಫ್ ಆಯುರ್ವೇದಿಕ್ ಸೈನ್ಸಸ್ ಅಂಡ್ ರಿಸರ್ಚ್ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ-ವಿ.ಶಶಿಕಲಾ -3 ಚಿನ್ನದ ಪದಕ

►ಮಂಗಳೂರಿನ ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಪಿ ಕಾಲೇಜಿನ ಬಿಪಿಟಿ ವಿದ್ಯಾರ್ಥಿನಿ- ರೋಜಿನ ಮಾತಂಗುಲು- 3 ಚಿನ್ನದ ಪದಕ

►ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರತೀಕ್ಷಾ ಜೆ.ಪೈ-2 ಚಿನ್ನದ ಪದಕ

►ರಾಯಚೂರು ನವೋದಯ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ-ಸನ್ನಿಧಿ- 2 ಚಿನ್ನದ ಪದಕ

►ಕೆಎಲ್‍ಇ ಸೊಸೈಟಿ ಇನ್ಸಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸಸ್ ಕಾಲೇಜಿನ ಬಿಎಸ್ಸಿ ನಸಿರ್ಂಗ್ ವಿದ್ಯಾರ್ಥಿನಿವೀಣಾ ಸುರೇಶ್ ಸಿಂಗ್ ಶಿಗ್ಗಾವಿ- 2 ಚಿನ್ನದ ಪದಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News