×
Ad

ಮೇ 1: ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಗ್ರಹಗಳ ವೀಕ್ಷಣೆ

Update: 2022-04-29 21:04 IST

ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮೇ 1ರಂದು ಮುಂಜಾನೆ 4.30ರಿಂದ ದೂರದರ್ಶಕದ ಮೂಲಕ ಗುರು, ಶುಕ್ರ, ಮಂಗಳ ಮತ್ತು ಶನಿ ಗ್ರಹಗಳನ್ನು ಖಗೋಳ ಆಸಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಗ್ರಹಗಳು ತುಂಬಾ ಹತ್ತಿರದಲ್ಲಿರುವುದನ್ನು ಕಾಣಬಹುದಾಗಿದೆ. ವೀಕ್ಷಕರು ಮಾಸ್ಕ್ ಧರಿಸಿ ಕೇಂದ್ರಕ್ಕೆ ಆಗಮಿಸಿ ಈ ಅಪರೂಪದ ದೃಶ್ಯವನ್ನು (ಶುಭ್ರ ಆಕಾಶವಿದ್ದಲ್ಲಿ) ಕಾಣಬಹುದಾಗಿದೆ ಎಂದು ಕೇಂದ್ರದ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News