ವೇದ ಮಂತ್ರಗಳಿಗಿಂತ ಜೈ ಭೀಮ್ ಘೋಷಣೆ ಮುಖ್ಯ: ಹಂಸಲೇಖ

Update: 2022-04-29 17:21 GMT

ಸಕಲೇಶಪುರ: ಎ: 29: 'ಶೋಷಿತರ ಪಾಲಿಗೆ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಿರ್ಭಿತಿಯಿಂದ ಬದುಕು ನಡೆಸಲು ಸಾಧ್ಯವಾಗಿದ್ದು ವೇಧ ಮಂತ್ರಗಳ ಪಠಣೆಗಿಂತ ಜೈ ಭೀಮ್ ಎಂದು ಘೋಷಣೆ ಕೂಗುವುದು ಅರ್ಥಪೂರ್ಣವಾಗಿದೆ' ಎಂದು   ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಗುರುವಾರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 131 ನೇ ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಮಲೆನಾಡು ಜೈ ಭೀಮ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 'ಕೆಳವರ್ಗದಲ್ಲಿದವರು ಸಮಾಜದ ಮುಖ್ಯ ವೇಧಿಕೆಗೆ ಬರಲು ಹಾಗೂ ಈ ಸಮಾಜದಲ್ಲಿ ತಲೆ ಎತ್ತಿ ರಾಜರೋಷವಾಗಿ ತಿರುಗಾಡಲುಅಂಬೇಡ್ಕರ್ ಹೇಳಿದ ಶಿಕ್ಷಣ,ಸಂಘಟನೆ ಹಾಗೂ ಹೋರಾಟ ಎಂಬ ಈ ಮೂರು ಮಂತ್ರಗಳೆ ಕಾರಣವಾಗಿದೆ' ಎಂದರು.

ಪ್ರತಿಯೊಬ್ಬರ ಜೀವನದಲ್ಲಿ ವಿವಾಹ ಎಂಬುವುದು ಪ್ರಮುಖವಾದ ಘಟ್ಟವಾಗಿದ್ದು ಗಂಡ ಹೆಂಡತಿ ಅನುನ್ಯವಾಗಿ ಜೀವನ ನಡೆಸಿದಾಗ ಮಾತ್ರ ಮದುವೆ ಎಂಬ ಪದಕ್ಕೆ ನಿಜವಾದ ಅರ್ಥ ಸಿಗಲಿದೆ ಆದ್ದರಿಂದ ಕೋಪವನ್ನು ತ್ಯೆಜಿಸಿ ಪ್ರೀತಿಯಿಂದ ಕೂಡಿ ಬಾಳಬೇಕು ಎಂದು ನವ ವಧುವರರಿಗೆ ಕಿವಿ ಮಾತು ಹೇಳಿದರು.
 
ಮಾಂಗಲ್ಯ ಧಾರಣೆಗೂ ಮುನ್ನ ನವ ಜೋಡಿಗಳು ಪಟ್ಟಣದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಿ ಮಿನಿವಿಧಾನ ಸೌದದ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧಿಕಾರಾದ ಮಾಜಿ ಅದ್ಯಕ್ಷರು ಹಾಗೂ ಭಾಷಾ ತಜ್ನರಾದ ಎಸ್.ಜಿ ಸಿದ್ದರಾಮಯ್ಯ,ಖ್ಯಾತ ಲೇಕಕರಾದ ರುದ್ರಪ್ಪ ಹನಗವಾಡಿ,ರಾಜ್ಯ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದಿವ್ಯ,ಸ್ನೇಹ ಜೀವಿ ಟ್ರಸ್ಟ್ ನ ಅಮರನಾಥ್,ಜಿಲ್ಲಾ ಯುವ ಕಾಂಗ್ರೇಸ್ ಅದ್ಯಕ್ಷ ರಂಜಿತ್ ಗೊರುರೂ, ಕಾಂಗ್ರೇಸ್ ತಾಲೂಕು ಅಧ್ಯಕ್ಷ ಬಾಸ್ಕರ್ ,ಕಾರ್ಯದರ್ಶಿ ಕೊಲ್ಲಹಳ್ಳಿ ಸಲೀಂ,ಮಾಜಿ ತಾಪಂ ಉಪಧ್ಯಾಕ್ಷ ವೈ.ಆರ್ ಮಂಜುನಾಥ್,ಉದ್ಯಮಿ ಜಯಪ್ರಕಾಶ್,ತಾಲ್ಲೂಕುನ ಎಸ್ ಟಿ ,ಎಸ್ ಸಿ ಘಟಕದ ಅದ್ಯಕ್ಷ ದೊಡ್ಡೀರಯ್ಯ,ಸಮಾಜ ಸೇವಕರಾದ ವೇಣು ಭಾರತೀಯ,ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕ ಫಾರೂಕ್ , ಮಲೆನಾಡು ಜೈ ಭೀಮ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಭುವನಾಕ್ಷ,ಕಾರ್ಯದರ್ಶೀ ಪ್ರಶಾಂತ್ ಕಲ್ಗಾಣಿ ಸೇರಿದಂತೆ ಇನ್ನಿತತರು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News