ಈಜಿಪ್ಟ್: 3 ಪತ್ರಕರ್ತರನ್ನು ಬಿಡುಗಡೆಗೊಳಿಸಿದ ಅಧಿಕಾರಿಗಳು

Update: 2022-05-01 17:37 GMT

ಕೈರೊ, ಮೇ 1: ಈಜಿಪ್ಟ್ನ ಅಧಿಕಾರಿಗಳು ಮೂವರು ಪತ್ರಕರ್ತರನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಈಜಿಪ್ಟ್ನ ಪತ್ರಕರ್ತರ ಸಂಘದ ಅಧ್ಯಕ್ಷರು ರವಿವಾರ ಹೇಳಿದ್ದಾರೆ. ಅಮೀರ್ ಅಬ್ದಲ್ ಮೊನಿಯಮ್, ಹನಿ ಗ್ರೆಯಿಷಾ ಮತ್ತು ಎಸ್ಸಾಂ ಅಬ್ದೀನ್ರನ್ನು ಸುಮಾರು ಒಂದೂವರೆ ವರ್ಷದ ಜೈಲುವಾಸದ ಬಳಿಕ ರವಿವಾರ ಬಿಡುಗಡೆಗೊಳಿಸಲಾಗಿದೆ. 

ಜೈಲಿನ ಸಮವಸ್ತ್ರ ಧರಿಸಿರುವ ಮೂವರು ಪತ್ರಕರ್ತರು ಬಿಡುಗಡೆ ಆದೇಶದ ಬಳಿಕ ತಮ್ಮ ಕುಟುಂಬದ ಸದಸ್ಯರನ್ನು ಖುಷಿಯಿಂದ ತಬ್ಬಿಕೊಂಡಿರುವ ವೀಡಿಯೊವನ್ನು ಈಜಿಪ್ಟ್ನ ಪತ್ರಕರ್ತರ ಸಂಘದ ಉಪಾಧ್ಯಕ್ಷ ಖಾಲಿದ್ ಎಲ್-ಬಾಶಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡಿರುವ ಮತ್ತು ಭಯೋತ್ಪಾದಕ ಸಂಘಟನೆಗೆ ಸೇರಿಕೊಂಡ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು.

 ಇದೀಗ ವಿಚಾರಣೆ ಬಾಕಿಯಿರಿಸಿ ಇವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗಷ್ಟೇ ಈಜಿಪ್ಟ್ ನ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಹಲವು ಸಾಹಿತಿಗಳು, ಮಾನವ ಹಕ್ಕು ಕಾರ್ಯಕರ್ತರ ಸಹಿತ 41 ಮಂದಿಯನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದ್ದರು. ಗುರುವಾರ ಪ್ರಮುಖ ರಾಜಕೀಯ ಕಾರ್ಯಕರ್ತ ಹೊಸ್ಸಾಂ ಮೋನಿಸ್ರನ್ನೂ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಅಧ್ಯಕ್ಷರ ಕ್ಷಮಾದಾನ ಸಮಿತಿಯನ್ನು ಪುನರ್ರಚಿಸಿ ಹೊಸ ಸದಸ್ಯರನ್ನು ನೇಮಕಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News