ಆದೇಶ ಪ್ರತಿ ಸಿಗುವ ಮುನ್ನ ಪಿಎಸ್ ಐ ಸಮವಸ್ತ್ರ ಧರಿಸಿ ಪೋಸ್‌ ಕೊಟ್ಟಿದ್ದ ಕಾನ್‌ಸ್ಟೆಬಲ್ ಅಮಾನತು

Update: 2022-05-05 17:31 GMT

ಬೆಂಗಳೂರು : ಪಿಎಸ್‌ಐ ನೇಮಕಾತಿ ಆದೇಶಕ್ಕೂ ಮುನ್ನವೇ PSI ಸಮವಸ್ತ್ರ ಧರಿಸಿದ್ದ ಆರೋಪದಲ್ಲಿ ವಿವೇಕನಗರ ಠಾಣೆ ಕಾನ್‌ಸ್ಟೆಬಲ್ ಬಸನಗೌಡ ಕರೇಗೌಡ, ಅವರನ್ನು ಅಮಾನತು  ಮಾಡಲಾಗಿದೆ.

545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ‍್ಯಾಂಕ್‌ ಪಡೆಯುತ್ತಿದ್ದಂತೆ ಎರಡು ಸ್ಟಾರ್ ಸಮೇತ ಸಮವಸ್ತ್ರ ಧರಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್​​ ನಿಯಮ ಉಲ್ಲಂಘಿಸಿದ್ದಕ್ಕೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್​​ ಅನುಚೇತ್ ಅಮಾನತು​​ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.

ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ಬಸನಗೌಡ ಕರೇಗೌಡ, ಸಮವಸ್ತ್ರ ಧರಿಸಿ ಊರಿನ ಕಾರ್ಯಕ್ರಮಗಳ ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಊರಿನ ಕೆಲವುಕಡೆಗಳಲ್ಲಿ ಸಮವಸ್ತ್ರ ಧರಿಸಿದ್ದ ಭಾವಚಿತ್ರದೊಂದಿಗೆ ಫ್ಲೆಕ್ಸ್,ಬ್ಯಾನರ್ ಗಳಲ್ಲಿ ಪೋಸ್ ಕೊಟ್ಟಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೊ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದೆ.  ಈ ಬಗ್ಗೆ ಪರಿಶೀಲನೆ ನಡೆಸಿದ್ದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಕಾನ್‌ಸ್ಟೆಬಲ್ ಬಸನಗೌಡನನ್ನು ಅಮಾನತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News