ಕಿನ್ಯ : ಕೂಟು ಝಿಯಾರತ್ ಗೆ ಚಾಲನೆ

Update: 2022-05-10 16:45 GMT

ಉಳ್ಳಾಲ:  ಕಿನ್ಯ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಹಝ್ರತ್‌ ಹುಸೈನ್ ಮುಸ್ಲಿಯಾರ್ (ಖ.ಸಿ) ಕಿನ್ಯ ಹೆಸರಿನಲ್ಲಿ ನಡೆಯುವ ಕೂಟು ಝಿಯಾರತ್ ಕಾರ್ಯಕ್ರಮವನ್ನು ಅಸ್ಸಯ್ಯಿದ್ ಕೆ.ಎಸ್. ಅಹ್ಮದ್ ಮುಕ್ತಾರ್ ತಂಙಳ್  ಸೋಮವಾರ ಉದ್ಘಾಟಿಸಿದರು

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ   ಇಸ್ಮಾಯಿಲ್ ಹಾಜಿ ಕಿನ್ಯ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಮಂಜನಾಡಿ ಜುಮ್ಮಾ ಮಸೀದಿ ಮುದರ್ರಿಸ್ ಪಿ.ಎ.ಅಹ್ಮದ್ ಬಾಖವಿ ಧಾರ್ಮಿಕ ಉಪನ್ಯಾಸ ನೀಡಿದರು.

ಕಾರ್ಯಕ್ರಮ ದಲ್ಲಿ ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ, ಉಪಾಧ್ಯಕ್ಷ  ಕುಂಞಿ ಹಾಜಿ,  ಕಾರ್ಯದರ್ಶಿ ಅಬ್ದುಲ್ ಖಾದರ್, ಕೋಶಾಧಿಕಾರಿ ಸಾಧುಕುಂಞಿ ಸಾಗ್ ಬಾಗ್,  ಇಸ್ಮಾಯಿಲ್  ಸ ಅದಿ ಕಿನ್ಯ ಉಪಸ್ಥಿತರಿದ್ದರು.

ಕಿನ್ಯ ಕುತುಬಿಯ ಮದ್ರಸ ಸದ್ ರ್ ಫಾರೂಕ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News