ಮೇ 14: ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ

Update: 2022-05-12 11:49 GMT

ಕೊಣಾಜೆ:  ಫಾ. ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ೩೨ನೇ ಪದವಿ ಪ್ರದಾನ ಸಮಾರಂಭ ಕಂಕನಾಡಿಯ ಫಾ. ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೇ ೧೪ರಂದು ನಡೆಯಲಿದೆ ಎಂದು ಫಾ. ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.

ದೇರಳಕಟ್ಟೆಯ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಂಸ್ಥೆಯು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ ೭ವಿಶೇಷತೆಗಳಲ್ಲಿ ಹೋಮಿಯೋಪಥಿ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ನಡೆಸುತ್ತಿದೆ ಎಂದರು.

ಪದವಿ ಪ್ರದಾನ ಸಮಾರಂಭದಲ್ಲಿ 99 ಹೋಮಿಯೋಪಥಿ ಪದವಿ ಹಾಗೂ 26 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು. ೨೦೨೧ರ ಸಾಲಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅವರಲ್ಲಿ ಹೋಮಿಯೋಪಥಿ ಪದವಿಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯ ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳಿದ್ದು ಈ ವರ್ಷ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು ಅವಧಿವಾರು 3 ರ‍್ಯಾಂಕ್ ಹಾಗೂ ವಿಷಯವಾರು 12ರ‍್ಯಾಂಕ್ ಗಳಿಸುವುದರೊಂದಿಗೆ ಒಟ್ಟು 166 ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿದೆ.

೨೦೧೫-೧೬ ನೇ ಸಾಲಿನ ರಾ ಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನು ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರೆ ಡಾ. ಡಾನಿಯಾ ಗಳಿಸಿದ್ದು ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂಧ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು ೨೦೧೮-೧೯ರ ಹೋಮಿಯೋಪಥಿ ಫಾರ್ಮಸಿ ವಿಭಾಗದ ಡಾ. ಗಾಯತ್ರಿ ಕ್ರೋವಿಡಿ  ಪಡೆದಿದ್ದು  ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.

ಫಾ. ಮುಲ್ಲರ್ ಸೇವಾ ಸಂಸ್ಥೆಯು ನೀಡುವ ಅಧ್ಯಕ್ಷೀಯ ಚಿನ್ನದ ಪದಕವನ್ನು ಘೋಷಿಸಲಿದ್ದು ಕಳೆದ ಐದೂವರೆ ವರ್ಷಗಳ ವಿದ್ಯಾರ್ಥಿಜೀವನದಲ್ಲಿ ಶಿಕ್ಷಕೀಯ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆ ದೊರಕಲಿದೆ.  ಅದೇ ರೀತಿ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ೩ ವರ್ಷಗಳ ವಿದ್ಯಾರ್ಥಿ ಜೀವನದಲ್ಲಿಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗುರುತಿಸಿ ವಿಶೇಷ ಬಹುಮಾನದೊಂದಿಗೆ ಸನ್ಮಾನಿಸಲಾಗುವುದು ಎಂದರು.

ಬೆಳಗ್ಗೆ 11 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಫಾ. ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ದಾನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್‌ಮೆನ್ ಡಾ.ಎಮ್. ಮೋಹನ್ ಆಳ್ವ, ಮೆಡಿಕಲ್ ಅಸೆಸ್‌ ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಹೋಮಿಯೋಪಥಿಯ ಅಧ್ಯಕ್ಷ ಡಾ.ಕೆ.ಆರ್.ಜನಾರ್ದನ್ ನಾಯರ್ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು.

ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ವಂ. ರೋಶನ್‌ ಕ್ರಾಸ್ತಾ, ಉಪ ಆಡಳಿತಾಧಿಕಾರಿ ರೋಹನ್‌ಡಾಯಸ್, ಪ್ರಿನ್ಸಿಪಾಲ್ ಡಾ.  ಇ.ಎಸ್.ಜೆ. ಪ್ರಭುಕಿರಣ್, ವೈಸ್ ಪ್ರಿನ್ಸಿಪಾಲ್ ಡಾ. ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಯು.ಕೆ, ಪದವಿ ಪ್ರದಾನ ಕರ್ಯಕ್ರಮ-೨೦೨೨ಸಂಯೋಜಕ ಡಾ. ರಂಜನ್ ಸಿ. ಬ್ರಿಟ್ಟೊ ಹಾಗೂ  ಮಾಧ್ಯಮ ಸಮಿತಿ ಸಂಯೋಜಕಿ ಡಾ. ಅನುಷಾ ಜಿ.ಎಸ್,ಉಪಸ್ಥಿತರಿದ್ದರು.

ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಗುರುತಿಸಲ್ಪಟ್ಟಿದೆ. ನವದೆಹಲಿಯ ಹೋಮಿಯೋಪಥಿ ರಾಷ್ಟ್ರೀಯ ಪರಿಷತ್ತು ಮತ್ತು ಆಯುಷ್ ಇಲಾಖೆ ಮಾನ್ಯತೆ ಪಡೆದಿದೆ.

ಔಷಧಿ ಶಾಸ್ತ್ರಿಯ ವಿಚಕ್ಷಣೆಗೆ ಪ್ರಾದೇಶಿಕ ಕೇಂದ್ರವಾಗಿದ್ದು, ಇತ್ತೀಚಿಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಎಲ್ಲಾ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡುವ ಕೇಂದ್ರವನ್ನಾಗಿ ಗುರುತಿಸಲ್ಪಟ್ಟಿದೆ. ನ್ಯಾಕ್‌ನಿಂದ “ಎ’ ಗ್ರೇಡ್ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News