ಮತಾಂತರ ನಿಷೇಧ ಸುಗ್ರೀವಾಜ್ಞೆ | ರಾಜ್ಯಪಾಲರು ಅಂಕಿತ ಹಾಕಬಾರದು: ಯು.ಟಿ ಖಾದರ್

Update: 2022-05-12 13:09 GMT

ಬೆಂಗಳೂರು, ಮೇ 12: 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ' ಅಧ್ಯಾದೇಶ (ಸುಗ್ರಿವಾಜ್ಞೆ) ಹೊರಡಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದ್ದು, ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  'ಮತಾಂತರ ನಿಷೇಧ ಕಾಯ್ದೆ ವಿಧಾನ ಪರಿಷತ್ ಅನುಮೋದನೆ ಬಾಕಿ ಇರುವಾಗ ಯಾವುದೇ ಚರ್ಚೆ ನಡೆಸದೇ ಸರ್ಕಾರ ಏಕಾಏಕಿ ಸುಗ್ರಿವಾಜ್ಞೆ ಮೂಲಕ ಕಾಯ್ದೆ ತರುವ ತುರ್ತು ಮತ್ತು ಅನಿವಾರ್ಯತೆ ಏನಿತ್ತು ?' ಎಂದು ಪ್ರಶ್ನಿಸಿದ್ದಾರೆ. 

'ಸಂವಿಧಾನ ವಿರೋಧಿ ಹಾಗೂ ಸರ್ಕಾರದ ಹಿಂಬಾಗಿಲ ಕೃತ್ಯವನ್ನು ಘನವೆತ್ತ ರಾಜ್ಯಪಾಲರು ತಿರಸ್ಕರಿಸಿ ವಿಧಾನ ಮಂಡಲದ ಗೌರವವನ್ನ ಉಳಿಸುವಂತೆ ಜನತೆಯ ಪರವಾಗಿ ಮನವಿ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.  

ಇದನ್ನೂ ಓದಿ... ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಸಂಪುಟ ಸಭೆ ಒಪ್ಪಿಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News