ರಸ್ತೆ ಅಪಘಾತ; ಮಹಿಳೆ ಮೃತ್ಯು

Update: 2022-05-12 16:23 GMT

ಹೆಬ್ರಿ : ಸಹಸವಾರಳಾಗಿ ಬೈಕ್‌ನಲ್ಲಿ ಹೋಗುತಿದ್ದ ವೇಳೆ ನಡೆದ ಅಪಘಾತದಿಂದ ತಲೆಗೆ ಗಂಭೀರಗಾಯಗೊಂಡ ಮಹಿಲೆಯೊಬ್ಬರು ಸಾವನ್ನಪ್ಪಿದ ಘಟನೆ ವರಂಗ ಗ್ರಾಮದ ಮೈಲುಕಲ್ಲು ಎಂಬಲ್ಲಿಂದ ವರದಿಯಾಗಿದೆ. ಮೃತ ಮಹಿಳೆಯನ್ನು ಸುನಿತಾ (45) ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ಸುನಿತಾ ಅವರು ದಿವಾಕರ ಎಂಬವರ ಬೈಕ್‌ನಲ್ಲಿ ವರಂಗದಿಂದ ಉಪ್ಪಳದ ಕಡೆಗೆ ಸಾಗುತಿ ದ್ದಾಗ ಒಮ್ಮೆಗೇ ಬ್ರೇಕ್ ಹಾಕಿದ್ದರಿಂದ  ಸುನಿತಾ ಮೋಟಾರು ಸೈಕಲ್‌ನಿಂದ ಡಾಮರು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಇದರಿಂದ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪ ಟ್ಟರು. ಹೆಬ್ರಿ ಠಾಣೆಯಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News