ಪಂಜಾಬ್ ರಾಕೆಟ್ ದಾಳಿ : ಮುಖ್ಯ ಸಂಚುಕೋರ ಪಾಕ್ ಭಯೋತ್ಪಾದಕನ ಸಹಚರ; ಪೊಲೀಸರು

Update: 2022-05-13 16:21 GMT
PHOTO:ANI

ಚಂಡಿಗಡ,ಮೇ 13: ಪಂಜಾಬಿನ ಮೊಹಾಲಿಯಲ್ಲಿಯ ಗುಪ್ತಚರ ಕಚೇರಿಯ ಮೇಲೆ ನಡೆದ ರಾಕೆಟ್ ದಾಳಿಯ ಮುಖ್ಯ ಸಂಚುಕೋರ ಪಾಕಿಸ್ತಾನದಲ್ಲಿ ನೆಲೆಯೂರಿರುವ ಭಯೋತ್ಪಾದಕನ ನಿಕಟ ಸಹಚರನಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

ತರನ್‌ತರನ್ ನಿವಾಸಿ ಲಖ್ಬೀರ್ ಸಿಂಗ್ ಲಾಂಡಾ ಮುಖ್ಯ ಸಂಚುಕೋರನಾಗಿದ್ದಾನೆ. ಗ್ಯಾಂಗ್‌ಸ್ಟರ್ ಆಗಿರುವ ಆತ 2017ರಲ್ಲಿ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದ. ಲಾಂಡಾ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಹರಿಂದರ್ ಸಿಂಗ್ ರಿಂದಾನ ನಿಕಟ ಸಹಚರನಾಗಿದ್ದಾನೆ ಎಂದು
ಪಂಜಾಬ್ ಡಿಜಿಪಿ ವಿ.ಕೆ.ಭರ್ವಾ ಅವರು ಸುದ್ದಿಗಾರರಿಗೆ ತಿಳಿಸಿದರು.

ದಾಳಿ ನಡೆದ ಸಂದರ್ಭ ಹೆಚ್ಚಿನ ಅಧಿಕಾರಿಗಳು ಕಚೇರಿಯಿಂದ ನಿರ್ಗಮಿಸಿದ್ದರು,ಹೀಗಾಗಿ ಸಂದೇಶವೊಂದನ್ನು ರವಾನಿಸುವುದು ದಾಳಿಯ ಉದ್ದೇಶವಾಗಿತ್ತು ಎಂದರು.

 ಸೋಮವಾರ ಸಂಜೆ 7:45ರ ಸುಮಾರಿಗೆ ಮೊಹಾಲಿಯ ಸೆಕ್ಟರ್ 77ರಲ್ಲಿರುವ ಭಾರೀ ಬಿಗು ಭದ್ರತೆಯ ಕಟ್ಟಡದ ಮೂರನೇ ಅಂತಸ್ತಿನ ಮೇಲೆ ರಾಕೆಟ್ ಮೂಲಕ ಗ್ರೆನೇಡ್ ದಾಳಿಯನ್ನು ನಡೆಸಲಾಗಿತ್ತು ಈ ಘಟನೆಯ ಬಳಿಕ ಪಂಜಾಬನಾದ್ಯಂತ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲದೊಂದಿಗೆ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಮತ್ತು ಗ್ಯಾಂಗ್‌ಸ್ಟರ್ ಲಖ್ಬೀರ ಸಿಂಗ್ ಲಾಂಡಾ ದಾಳಿಯನ್ನು ಯೋಜಿಸಿದ್ದರು ಎಂದು ಭರ್ವಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News