'ಭಗತ್ ಸಿಂಗ್' ಪಾಠವನ್ನು ಕೈಬಿಟ್ಟಿಲ್ಲ: ಪಠ್ಯಪುಸ್ತಕ ಸಂಘ ಸ್ಪಷ್ಟನೆ

Update: 2022-05-17 11:06 GMT
'ಭಗತ್ ಸಿಂಗ್

ಬೆಂಗಳೂರು: ರಾಜ್ಯ ಸರಕಾರ 'ಭಗತ್ ಸಿಂಗ್' ಅವರ ಪಾಠವನ್ನು ಪಠ್ಯಪುಸ್ತಕದಿಂದ ಕೈಬಿಟ್ಟಿದೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಪಠ್ಯಪುಸ್ತಕ ಸಂಘ ಸ್ಪಷ್ಟನೆ ನೀಡಿದೆ. 

'ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಿ, ಪರಿಷ್ಕರಿಸಲು  ರೋಹಿತ್‌ ಚಕ್ರತೀರ್ಥರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಲಾಗಿತ್ತು. ಈ ಸಮಿತಿಯು 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು, ಹಾಗೂ 1 ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ'. 

'ಸುದ್ದಿ ಮಾಧ್ಯಮಗಳಲ್ಲಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿದ್ದ 'ಭಗತ್ ಸಿಂಗ್' ಗದ್ಯವನ್ನು ಕೈಬಿಟ್ಟು 'ಹೆಡಗೆವಾರ್' ರವರ ಬಗ್ಗೆ ಗದ್ಯವನ್ನು ಸೇರಿಸಲಾಗಿದೆ ಎಂದು ಪ್ರಕಟಣೆ ಇರುತ್ತದೆ. ವಾಸ್ತವವಾಗಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಿಂದ 'ಭಗತ್ ಸಿಂಗ್' ಗದ್ಯ ಪಾಠವನ್ನು ಕೈಬಿಟ್ಟಿರುವುದಿಲ್ಲ' ಎಂದು  ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News