ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

Update: 2022-05-17 16:39 GMT

ಬೆಂಗಳೂರು, ಮೇ 17: ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾತೃ ವೃಂದದಡಿ ವರದಿಗಾರರು-2, ಕಂಪ್ಯೂಟರ್ ಆಪರೇಟರ್-4, ಕಿರಿಯ ಸಹಾಯಕ-10, ಬೆರಳಚ್ಚುಗಾರರು-1, ದಲಾಯತ್-23 ಹೀಗೆ ಒಟ್ಟು 43 ಹುದ್ದೆಗಳು ಹಾಗೂ ಸ್ಥಳೀಯ ವೃಂದದಡಿ ವರದಿಗಾರರು-3, ಶೀಘ್ರಲಿಫಿಗಾರರು-2, ಕಿರಿಯ ಸಹಾಯಕರು-3, ಸ್ವಾಗತಕಾರರು-1, ಬೆರಳಚ್ಚುಗಾರರು-3, ಬಡಗಿ-1, ವಾಹನಚಾಲಕರು-8, ದಲಾಯತ್-11, ಸ್ವೀಪರ್-2 ಹೀಗೆ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮೇ 27ರಂದು ಕೊನೆಯ ದಿನವಾಗಿರುತ್ತದೆ. ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಇನ್ನಿತರ ಮಾಹಿತಿ ಹಾಗೂ ಪೂರ್ಣ ವಿವರವನ್ನು  https://kla.kar.nic.in/assembly/career/career.htm ಲಿಂಕ್ ಅಡಿಯಲ್ಲಿ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News