ಹೆಡ್ಗೇವಾರ್ ದೇಶದಲ್ಲಿ ಕೋಮು ಭಾವನೆ ಬೆಳೆಸಿದ ವ್ಯಕ್ತಿ: ಬಿ.ಕೆ.ಹರಿಪ್ರಸಾದ್

Update: 2022-05-17 16:41 GMT

ಬೆಂಗಳೂರು, ಮೇ 17: ‘ಆರೆಸೆಸ್ಸ್ ಸಂಸ್ಥಾಪಕ ಕೇಶವ ಬಲರಾಮ್ ಹೆಡ್ಗೇವಾರ್ ದೇಶದಲ್ಲಿ ಕೋಮು ಭಾವನೆ ಬೆಳೆಸಿದ ವ್ಯಕ್ತಿ. ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿದ್ದವರು, ಧರ್ಮದ ಸಂಘಟನೆ ಮುಖ್ಯಸ್ಥರಾಗಿದ್ದವರು. ಸ್ವಾತಂತ್ರ್ಯ ಪ್ರೇಮಿ ಭಗತ್ ಸಿಂಗ್, ಗುರು ನಾರಾಯಣ್, ಕುವೆಂಪುರವರ ವಿಚಾರಗಳನ್ನ ಕೈ ಬಿಟ್ಟಿರುವುದನ್ನ ಒಪ್ಪಲು ಸಾಧ್ಯವಿಲ್ಲ' ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನ ಪಠ್ಯ ಪುಸ್ತಕದಲ್ಲಿ ತರಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣವನ್ನ ಕೇಸರಿಕರಣ ಮಾಡಲಾಗುತ್ತಿದೆ. ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಭವಿಷ್ಯತ್ತಿನಲ್ಲಿ ಭಯಾನಕ ವಾತಾವರಣ ಸೃಷ್ಟಿಮಾಡಲು ಹುನ್ನಾರ ನಡೆಯುತ್ತಿದೆ' ಎಂದು ವಾಗ್ದಾಳಿ ನಡೆಸಿದರು.
ಕೊಡಗು ಜಿಲ್ಲೆಯ ಪೊನ್ನಂಪೇಟೆ ಶಾಲೆಯ ಆವರಣದಲ್ಲಿ ಗನ್ ತರಬೇತಿ ನೀಡಿದ್ದು, ದಲಿತರು ಗನ್ ತರಬೇತಿ ಪಡೆದರೆ ಅವರಿಗೆ ನಕ್ಸಲೈಟ್ ಪಟ್ಟ ಕಟ್ಟುತ್ತಾರೆ. ಮುಸ್ಲಿಮರು ತರಬೇತಿ ಪಡೆದರೆ ಭಯೋತ್ಪಾದಕ ಎಂಬ ಪಟ್ಟ ಕಟ್ಟುತ್ತಾರೆ. ಆದರೆ, ಅದೇ ಬಜರಂಗದಳದವರು ಆತ್ಮರಕ್ಷಣೆಗೆ ಗನ್ ತರಬೇತಿ ಪಡೆಯುತ್ತಾರಾ?' ಎಂದು ಹರಿಪ್ರಸಾದ್ ಟೀಕಿಸಿದರು.

‘ಎಲ್ಲರನ್ನ ರಕ್ಷಣೆ ಮಾಡಲು ಪೊಲೀಸ್ ಇದೆ, ಮಿಲಿಟರಿ ಇದೆ. ಹೀಗಾಗಿ ಬಜರಂಗದಳದವರಿಂದ ಯಾರಿಗೂ ರಕ್ಷಣೆ ಅಗತ್ಯವಿಲ್ಲ. ಶಾಲೆಯ ಆವರಣದಲ್ಲಿ ಗನ್ ತರಬೇತಿ ನೀಡಿರುವುದು ಕಾನೂನು ಬಾಹಿರ, ಸಂವಿಧಾನ ಬಾಹಿರ. ಹೀಗಾಗಿ ಸರಕಾರ ತಪ್ಪಿತಸ್ಥರ ವಿರುದ್ದ ಕೂಡಲೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News