ಅಝೋವ್ಸ್ತಲ್ ನಲ್ಲಿ 265 ಉಕ್ರೇನ್ ಯೋಧರ ಶರಣಾಗತಿ: ರಶ್ಯ

Update: 2022-05-17 18:47 GMT

ಮಾಸ್ಕೊ, ಮೇ 17: ಉಕ್ರೇನ್ನ ಬಂದರು ನಗರ ಮರಿಯುಪೋಲ್ನ ಅಝೋವ್ಸ್ತಲ್ ಉಕ್ಕಿನ ಸ್ಥಾವರದೊಳಗೆ ಇದ್ದ 265 ಉಕ್ರೇನ್ ಸೈನಿಕರು ಶರಣಾಗಿದ್ದಾರೆ ಎಂದು ರಶ್ಯದ ರಕ್ಷಣಾ ಇಲಾಖೆ ಮಂಗಳವಾರ ಹೇಳಿದೆ.

ಕಳೆದ 24 ಗಂಟೆಯಲ್ಲಿ 265 ಉಗ್ರರು ತಮ್ಮ ಆಯುಧಗಳನ್ನು ಕೆಳಗಿಳಿಸಿ ಶರಣಾಗಿದ್ದಾರೆ. ಇವರಲ್ಲಿ 51 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹಾಗೂ ವೈದ್ಯಕೀಯ ನೆರವಿನ ಅಗತ್ಯ ಇರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News