ಭಾರತವನ್ನು ಶ್ರೀಲಂಕಾಕ್ಕೆ ಹೋಲಿಸಿದ ರಾಹುಲ್ ಗಾಂಧಿ‌

Update: 2022-05-18 15:22 GMT

ಹೊಸದಿಲ್ಲಿ,ಮೇ 18: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶದ ಆರ್ಥಿಕ ಸ್ಥಿತಿಯನ್ನು ಟೀಕಿಸಿ ಬುಧವಾರ ಮಾಡಿರುವ ಟ್ವೀಟ್‌ನಲ್ಲಿ ಭಾರತವನ್ನು ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಹೋಲಿಸಿದ್ದಾರೆ. ಟ್ವೀಟ್‌ನೊಂದಿಗೆ ನಿರುದ್ಯೋಗ,ಇಂಧನ ಬೆಲೆಗಳು ಮತ್ತು ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಂದೇ ರೀತಿಯಾಗಿ ಕಾಣುವ ಉಭಯ ದೇಶಗಳ ಮೂರು ಜೋಡಿ ಗ್ರಾಫ್‌ಗಳನ್ನು ಅವರು ಲಗತ್ತಿಸಿದ್ದಾರೆ.


‘ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವುದು ಸತ್ಯಗಳನ್ನು ಬದಲಿಸುವುದಿಲ್ಲ. ಬಹಳಷ್ಟು ರೀತಿಯಲ್ಲಿ ಭಾರತವಿಂದು ಶ್ರೀಲಂಕಾದಂತೆಯೇ ಕಾಣಿಸುತ್ತಿದೆ ’ ಎಂದು ಟ್ವೀಟಿಸಿರುವ ರಾಹುಲ್, ಭಾರತ ಮತ್ತು ಶ್ರೀಲಂಕಾಗಳ ತಲಾ ಮೂರು ಗ್ರಾಫ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.ಮೊದಲ ಗ್ರಾಫ್ ಉಭಯ ದೇಶಗಳಲ್ಲಿ 2017ರಿಂದ ನಿರುದ್ಯೋಗ ಹೆಚ್ಚುತ್ತಿರುವುದನ್ನು ತೋರಿಸಿದೆ. ಭಾರತದಲ್ಲಿ ಕೋವಿಡ್ ಲಾಕ್ಡೌನ್ ಹೇರಲಾಗಿದ್ದ 2020ರ ಸುಮಾರಿಗೆ ನಿರುದ್ಯೋಗವು ಉತ್ತುಂಗಕ್ಕೇರಿದ್ದನ್ನು ಮತ್ತು ಮರುವರ್ಷ ಅಲ್ಪಪ್ರಮಾಣದಲ್ಲಿ ಇಳಿಕೆಯಾಗಿದ್ದನ್ನು ಗ್ರಾಫ್‌ನಲ್ಲಿ ತೋರಿಸಲಾಗಿದೆ.ಎರಡನೇ ಗ್ರಾಫ್ ಭಾರತ ಮತ್ತು ಶ್ರೀಲಂಕಾಗಳಲ್ಲಿ ಪೆಟ್ರೋಲ್ ಬೆಲೆಗಳನ್ನು ಹೋಲಿಸಿದೆ. ಪೆಟ್ರೋಲ್ ಬೆಲೆ 2017ರಿಂದ ಏರುತ್ತಿದೆ ಮತ್ತು 2021ರ ಸುಮಾರಿಗೆ ಗಗನಮುಖಿಯಾಗಿದೆ ಎನ್ನುವುದನ್ನು ಗ್ರಾಫ್‌ಗಳು ಬಿಂಬಿಸಿವೆ.ಎರಡೂ ದೇಶಗಳಲ್ಲಿ 2020-21ರಿಂದ ಕೋಮು ಹಿಂಸಾಚಾರ ಹೆಚ್ಚುತ್ತಿರುವುದನ್ನು ಮೂರನೇ ಗ್ರಾಫ್ ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News