ಹಣಕಾಸು ಅವ್ಯವಹಾರ: ಭಾರತೀಯ ಮೂಲದ ಸಿಇಒ ವಜಾಗೊಳಿಸಿದ ಸಿಂಗಾಪುರ ಕಂಪೆನಿ

Update: 2022-05-20 07:47 GMT
photo: Instagram/ankitibose

ಹೊಸದಿಲ್ಲಿ: ಸಿಂಗಾಪುರ ಮೂಲದ ಫ್ಯಾಶನ್ ಸ್ಟಾರ್ಟ್ ಅಪ್ ಜಿಲಿಂಗೋ ತನ್ನ ಭಾರತೀಯ ಮೂಲದ ಸಹ-ಸಂಸ್ಥಾಪಕಿ ಹಾಗೂ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಂಕಿತಿ ಬೋಸ್ ಅವರನ್ನು ಹಣಕಾಸು ಅವ್ಯವಹಾರ ಕುರಿತ ದೂರುಗಳ ತನಿಖೆಯ ನಂತರ ವಜಾಗೊಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಶುಕ್ರವಾರ  ವರದಿ ಮಾಡಿದೆ.

ಏಳು ವರ್ಷಗಳ ಹಿಂದೆ ಆರಂಭವಾಗಿರುವ ಸ್ಟಾರ್ಟ್‌ಅಪ್‌ನ ಮಂಡಳಿಯು ಮಾರ್ಚ್‌ನಲ್ಲಿ ಅಂಕಿತಿ ಬೋಸ್ ಅವರನ್ನು ಅಮಾನತುಗೊಳಿಸಿತ್ತು ಹಾಗೂ ಹಣಕಾಸು ಅವ್ಯವಹಾರವನ್ನು ತನಿಖೆ ಮಾಡಲು ಸ್ವತಂತ್ರ ಸಂಸ್ಥೆಯನ್ನು ನೇಮಿಸಿತು. ಸಂಸ್ಥೆಯು ಹಣಕಾಸು ಸಲಹೆಗಾರರನ್ನು ಸಹ ನೇಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News