'ಜ್ಞಾನವಾಪಿ ಮಸೀದಿಯಂತೆಯೇ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಸರ್ವೆ ನಡೆಸಿ': ಸಂಘಪರಿವಾರದಿಂದ ಡಿಸಿಗೆ ಮನವಿ

Update: 2022-05-20 15:30 GMT
(ಸಂಘಪರಿವಾರದಿಂದ ಡಿಸಿಗೆ ಮನವಿ |  ಶ್ರೀರಂಗಪಟ್ಟಣ ಜಾಮಿಯಾ ಮಸೀದಿ)

ಮಂಡ್ಯ, ಮೇ 20: ದೆಹಲಿಯ ಜ್ಞಾನವಾಪಿ ಮಸೀದಿಯಲ್ಲಿ ನಡೆದಂತೆ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲೂ ವಿಡಿಯೋಗ್ರಫಿ ಸರ್ವೇ, ಸಂಶೋಧನೆ ಅಥವಾ ಉತ್ಖನನ ನಡೆಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪಟ್ಟಣದ ಕೋಟೆಯ ಪ್ರವೇಶದ್ವಾರದ ಬಳಿ ಇರುವ ಮೂಡಲಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯವನ್ನು ಕ್ರಿ.ಶ.1787ರಲ್ಲಿ ಟಿಪ್ಪು ಸುಲ್ತಾನ್ ನಾಶಪಡಿಸಿ ಮಸೀದಿ ನಿರ್ಮಿಸಿರುವುದರ ಬಗ್ಗೆ  ಮೈಸೂರು ಸ್ಟೇಟ್ ಗೆಜೆಟಿಯರ್‌ನ ಮಂಡ್ಯ ಜಿಲ್ಲಾ ಭಾಗದ 493, 494ನೇ ಪುಟದಲ್ಲಿ ಉಲ್ಲೇಖವಿದೆ ಎಂದು ಮನವಿಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದಂತೆ ಶ್ರೀರಂಗಪಟ್ಟಣದ ಮಸೀದಿ ಬಗ್ಗೆಯೂ ಸರ್ವೆ ಮತ್ತು ಉತ್ಖನನ ನಡೆಸಬೇಕು. ಜತೆಗೆ, ಮಸೀದಿಯಲ್ಲಿ ನಡೆಯುತ್ತಿರುವ ಪ್ರಾರ್ಥನೆ, ಅಡುಗೆ, ಮದರಸ ಸ್ಥಗಿತಗೊಳಿಸಿ ಅಲ್ಲಿ ವಾಸಮಾಡುತ್ತಿರುವವರನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.

ವಿಶ್ವ ಹಿಂದೂಪರಿಷ್ ಜಿಲ್ಲಾ ಕಾರ್ಯದರ್ಶಿ ಸಿ.ಕೆ.ಬಾಲಕೃಷ್ಣ, ಸಹ ಕಾರ್ಯದರ್ಶಿ ಪುನೀತ್, ಸಂಯೋಜಕ ಬಸವರಾಜು, ನಿವೃತ್ತ ಎಎಸ್ಪಿ ಬಲರಾಮೇಗೌಡ, ಡಾಮಡಹಳ್ಳಿ ಡಿ.ಕೆ.ಕೇಶವ, ಶ್ರೀಕಂಠಸ್ವಾಮಿ, ಇತರರು ಮನವಿಪತ್ರ ಸಲ್ಲಿಸಿದರು.

ಇದನ್ನೂ ಓದಿ... ಮೇಲುಕೋಟೆ: ಟಿಪ್ಪು ಕಾಲದ 'ಸಲಾಂ ಆರತಿ'ಯ ಹೆಸರನ್ನು 'ಸಂಧ್ಯಾ ಆರತಿ' ಎಂದು ಬದಲಾಯಿಸುವ ಸಾಧ್ಯತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News